ಮಂಜೇಶ್ವರ: ಮಂಜೇಶ್ವರ ಅಬಕಾರಿ ದಳ ಚೆಕ್‍ಪೋಸ್ಟ್‍ನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ಭಾಗದಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ 151ಪವನು ಚಿನ್ನ ಹಾಗೂ ನಾಲ್ಕು ಲಕ್ಷ ರೂ. ಕಾಳಧನ ವಶಪಡಿಸಿಕೊಳ್ಳಲಾಗಿದೆ. ಎರಡು ದಿವಸಗಳಲ್ಲಿ ಪ್ರತ್ಯೇಕವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಗ, ನಗದು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸು ತಪಾಸಣೆ ನಡೆಸುವ ಮಧ್ಯೆ ಅನಧಿಕೃತವಾಗಿ ಸಗಿಸುತ್ತಿದ್ದ 96ಪವನು(768ಗ್ರಾಂ) ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ನಗರದ ಮುಜಾಫರ್ ಹುಸೈನ್ ಎಂಬಾನನ್ನು ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ 55ಪವನು ಚಿನ್ನ ಹಾಗೂ ನಾಲ್ಕು ಲಕ್ಷ ರೂ. ನಗದು ವಶಪಡಿಸಿಕೊಂಡು, ಕೋಯಿಕ್ಕೋಡ್ ಕಕ್ಕೋಡಿ ನಿವಾಸಿ ಮಹಮ್ಮದ್ ಫಾಸಿಲ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣವನ್ನು ಜಿಎಸ್‍ಟಿ ಇಲಾಖೆಗೆ ಹಸ್ತಾಂತರಿಸಲಾಗಿದೆ.




