ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆರ್ಕಳ ಸನಿಹದ ಪಡಿಞËರಮೂಲೆ ಕುಞÂಕಾನ ನಿವಾಸಿ ಅಬ್ದುಲ್ಲ ಎಂಬವರ ಹಿತ್ತಿಲ ಕೆರೆಯಲ್ಲಿ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಮಕ್ಕಳು ಮೀನು ಹಿಡಿಯಲು ಪೊದೆಗಳಿಂದ ಆವೃತವಾಗಿದ್ದ ಕೆರೆ ಸನಿಹ ತೆರಳಿದಾಗ ಅಸ್ಥಿಪಂಜರ ಕಂಡುಬಂದಿದ್ದು, ಈ ಬಗ್ಗೆ ನೀಡಿದ ಮಾಹಿತಿಯನ್ವಯ ವಿದ್ಯಾನಗರ ಠಾಣೆ ಇನ್ಸ್‍ಪೆಕ್ಟರ್ ಯು.ಪಿ ವಿಪಿನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಅಸ್ಥಿಯನ್ನು ಸಂಗ್ರಹಿಸಿ ಉನ್ನತ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಬೇಸಿಗೆಯಲ್ಲಿ ನೀರಾವರಿಗಾಗಿ ಕೆರೆಯನ್ನು ಬಳಸಲಾಗುತ್ತಿತ್ತು. ಎರಡು ತಿಂಗಳ ಹಿಂದೆ ಚೆರ್ಕಳ ಆಸುಪಾಸಿನಬಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಅದೇ ವ್ಯಕ್ತಿಯ ಅಸ್ಥಿಪಂಜರವಾಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



