ಬದಿಯಡ್ಕ: ಆಲ್ ಇಂಡಿಯಾ ಕಾನ್ ಫೆಡರೇಷನ್ ಆಫ್ ಎಸ್ಸಿ ಎಸ್ಟಿ ಆರ್ಗನೈಸೇಷನ್ಸ್‍ನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಾತ್ಮ ಅಯ್ಯಂಗಾಳಿಯವರ 162ನೇ ಜನ್ಮದಿನವನ್ನು ಕಾಸರಗೋಡು ಸರ್ಕಾರಿ ಶಾಲೆ ರಸ್ತೆಯಲ್ಲಿರುವ ಡಾನ್ ಬಾಸ್ಕೋ ಹಾಲ್‍ನಲ್ಲಿ ಗುರುವಾರ ಆಚರಿಸಲಾಯಿತು. ಕೇರಳ ರಾಜ್ಯ ಕಾರ್ಯದರ್ಶಿ ರಾಘವನ್ ಉದುಮ ಸಮಾರಂಭವನ್ನು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಅಧ್ಯಕ್ಷ ಇಚ್ಲಂಪಾಡಿ ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಜನರು ತಮ್ಮ ಸಮುದಾಯದ ಏಳಿಗಾಗಿ ಸಂಘಟಿತರಾಗಿ ಹೋರಾಟ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಕರೆಯಿತ್ತರು. ಸಿ ಬಿ ಚಂದ್ರ ಅಡೂರು, ಆನಂದ ಉದುಮ, ಶಶಿಧರ, ಸಿ ಪಿ ರಾಮನ್, ಪುರುಷೋತ್ತಮನ್ ಮೊದಲಪಾರ, ರಾಜನ್ ವಿ ಮತ್ತು ಸಿ.ಕೆ. ಗಣೇಶ್ ಪಾಡಿ ಅಯ್ಯಂಗಾಳಿಯವರ ಗುಣಗಾನ ಮಾಡಿದರು. ಕಜಂಪಾಡಿ ಲಿಂಗಪ್ಪ ಕುಮಾರ್ ಪೆರಿಯಡ್ಕ ಮತ್ತು ಸುಂದರ ಪಟ್ಟಾಜೆ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಜಿಲ್ಲಾ ಕಾರ್ಯದರ್ಶಿ ಪೆÇನ್ನಪ್ಪ ಅಮ್ಮಂಗೋಡ್ ಸ್ವಾಗತಿಸಿ, ಪುರುಷೋತ್ತಮ ಮೊದಲಪಾರ ವಂದಿಸಿದರು.




.jpg)
