ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀಅಯ್ಯಪ್ಪ ಭಜನಾ ಮಂದಿರದ ದಾರಂದ ಮುಹೂರ್ತ ಇತ್ತೀಚೆಗೆ ನಡೆಯಿತು.
ಮಂದಿರದ ಗೌರವಾಧ್ಯಕ್ಷ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಅವರು ಪ್ರಾರ್ಥನೆಯೊಂದಿಗೆ ದಾರಂದ ಮುಹೂರ್ತ ನಿರ್ವಹಿಸಿ ಶುಭಹಾರೈಸಿದರು. ಕೆ.ವಿ.ಸುಕುಮಾರನ್, ರಾಮ ಗುರುಸ್ವಾಮಿ, ಸುಂದರ ಗುರುಸ್ವಾಮಿ, ಗಣೇಶ ಗುರುಸ್ವಾಮಿ, ಮಂದಿರದ ಪುನರ್ ನಿರ್ಮಾಣ ಹಾಗೂ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.




.jpg)
.jpg)
