ಪೆರ್ಲ: ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮೀ ಮಹೋತ್ಸವ ಆ. 16 ರಂದು ಶನಿವಾರ ಸಂಜೆ 5 ರಿಂದ ಶ್ರೀ ಗೋವರ್ಧನ ಧರ್ಮಮಂದಿರ,ಅಮೃತಧಾರಾ ಗೋಶಾಲೆಯಲ್ಲಿ ಆಯೋಜಿಸಲಾಗಿದೆ.
ಸಂಜೆ 5. ಕ್ಕೆ ಗುರುವಂದನೆ, ಪ್ರಾರ್ಥನೆ, ಗೋಪೂಜೆ, ಭಜನೆ ಪ್ರಾರಂಭ, 5.30 ಶ್ರೀಗೋಪಾಲಕೃಷ್ಣ ಪೂಜೆ, ದುರ್ಗಾಪೂಜೆ, ವಿಷ್ಣುಸಹಸ್ರನಾಮಾರ್ಚನೆ, ಲಲಿತಾಸಹಸ್ರನಾಮಾರ್ಚನೆ, ಸಪ್ತಶತೀ ಪಾರಾಯಣ, ಲಕ್ಷ್ಮೀನಾರಾಯಣ ಹೃದಯಪಾರಾಯಣ, ರಾತ್ರಿ 8.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. 10ಕ್ಕೆ ಶ್ರೀಕೃಷ್ಣಜನ್ಮಾಷ್ಟಮೀ ಕಲ್ಪೋಕ್ತಪೂಜೆ, ಭಜನೆ, 11.30ಕ್ಕೆ ಮಹಾಮಂಗಳಾರತಿ, 12.ಕ್ಕೆ ಕೃಷ್ಣಜನ್ಮೋತ್ಸವ,ಅಘ್ರ್ಯ ಪ್ರದಾನ, ಶ್ರೀದೇವರಿಗೆ ತೊಟ್ಟಿಲು ಮಹೋತ್ಸವ, ಜೋಗುಳ ಹಾಡು, ಶ್ರೀದೇವರ ಶಯನೋತ್ಸವ ನಡೆಯಲಿದೆ ಎಂದು ಗೋಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




