ಮಂಜೇಶ್ವರ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಅ. 17ರಂದು ಮಧ್ಯಾಹ್ನ 12ಕ್ಕೆ ಮೂಡಂಬೈಲಿನ ವಾಗ್ದೇವಿ ಯಕ್ಷಗಾನ ಕಲಾಸಂಘದವರಿಂದ ಭೀಷ್ಮವಿಜಯ ಹಾಗೂ ಭೀಷ್ಮ ಸೇನಾಧಿಪತ್ಯ ಕಥಾಭಾಗಗಳ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮುರಳೀಮಾಧವ ಮಧೂರು ಭಾಗವಹಿಸಲಿದ್ದಾರೆ.




