ತಿರುವನಂತಪುರಂ: ಈ ವರ್ಷದ ಶಾಲಾ ಓಣಂ ಪರೀಕ್ಷೆಗಳು ಆ. 18 ರಿಂದ 29 ರವರೆಗೆ ನಡೆಯಲಿದೆ. ಹೈಯರ್ ಸೆಕೆಂಡರಿ ಪರೀಕ್ಷೆಗಳು 18 ರಿಂದ 29 ರವರೆಗೆ ಇರಲಿದೆ. ಎಲ್‌ಪಿ ವಿಭಾಗದಲ್ಲಿ, 20 ರಿಂದ ಪರೀಕ್ಷೆ ಆರಂಭಗೊಳ್ಳಲಿದೆ.
ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಗುಣಮಟ್ಟ (ಕ್ಯೂಐಪಿ) ಸಭೆಯಲ್ಲಿ 29 ರಂದು ಎಲ್ಲಾ ಶಾಲೆಗಳಲ್ಲಿ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಮತ್ತು ಓಣಂ ಆಚರಣೆಗಳನ್ನು ಆಯೋಜಿಸಲು ಮತ್ತು ಆ ದಿನ ಓಣಂ ರಜೆಗಾಗಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಯಿತು.
ಗಣೇಶ ಹಬ್ಬದ ಕಾರಣ ಕಾಸರಗೋಡು ಜಿಲ್ಲೆಯಲ್ಲಿ 27 ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಆ ದಿನದ ಪರೀಕ್ಷೆಗಳು 29 ರಂದು ನಡೆಯಲಿವೆ. ಅದೇ ದಿನ ಓಣಂ ಆಚರಣೆಯನ್ನೂ ನಡೆಸಲು ನಿರ್ದ್ಧರಿಸಲಾಗಿದೆ.




