ಚಾರುಮೂಡ್: ಗುರುಗ್ರಾಮ್‌ನಲ್ಲಿ ನಡೆದ ಮಿಸೆಸ್ ವರ್ಲ್ಡ್ ಇಂಟರ್‌ನ್ಯಾಶನಲ್ 2025 ಯೂನಿಟಿ ಸ್ಪರ್ಧೆಯಲ್ಲಿ ಕೇರಳೀಯ ಮಹಿಳೆ ಅಖಿಲಾ ಉನ್ನಿತ್ತಾನ್ ಅವರು ಮಿಸೆಸ್ ವರ್ಲ್ಡ್ ಯೂನಿಟಿ ಪ್ರಶಸ್ತಿ ಮತ್ತು ಮಿಸೆಸ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಅಖಿಲಾ ಉನ್ನಿತ್ತಾನ್ ಆಲಪ್ಪುಳದ ನೂರಡು ಮೂಲದವರು. ಇವರು ನೂರಡು ಎರುಮಕುಝಿ ವಲಿಯವೀಟಿಲ್‌ನ ಎಂ.ಜಿ.ಕೇಶವನ್ ಉನ್ನಿತ್ತಾನ್ ಮತ್ತು ರಾಧಾಮಣಿ ಅಮ್ಮನವರ ಪುತ್ರಿ. ಇವರ ಪತಿ ನಿತಿನ್ ಶ್ರೀಕುಮಾರ್. ಸಾಫ್ಟ್‌ವೇರ್ ಇಂಜಿನಿಯರ್. ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ ಅಖಿಲಾ ಪ್ರಸ್ತುತ ಬೆಂಗಳೂರಿನ ಯಲಹಂಕದಲ್ಲಿ ವಾಸಿಸುತ್ತಿದ್ದಾರೆ.




