HEALTH TIPS

1947 Calendar Viral: 78 ವರ್ಷಗಳ ಬಳಿಕ ಶುಕ್ರವಾರವೇ ಬಂದ ಸ್ವಾತಂತ್ರ್ಯ ದಿನ; 1947 ರ ಕ್ಯಾಲೆಂಡರ್ ವೈರಲ್​​​

ನಮಗೆ ಸ್ವಾತಂತ್ರ್ಯ ಲಭಿಸಿದ 1947 ಆಗಸ್ಟ್‌ 15 ರಂದು ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಪಡೆದ ದಿನ. ಈ ದಿನವು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಪ್ರತೀ ವರ್ಷ ಆಚರಿಸಲಾಗುತ್ತಿದೆಯಾದರೂ ಈ ವರ್ಷ ಬಹಳ ವಿಶೇಷವಾಗಿದೆ. 78 ವರ್ಷಗಳ ಬಳಿಕ ಸ್ವಾತಂತ್ರ್ಯೋತ್ಸವ ಶುಕ್ರವಾರದಂದು ಬಂದಿದೆ. ಅಂದರೆ 1947 ರ ಕ್ಯಾಲೆಂಡರ್​ ಮತ್ತು 2025ರ ಕ್ಯಾಲೆಂಡರ್​​ನಲ್ಲಿ ಬಹಳಷ್ಟು ಹೋಲಿಕೆಯಿರುವುದನ್ನು ಕಾಣಬಹುದು. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

@anasuya.shastri.96 ಎಂಬ ಫೇಸ್​​ ಬುಕ್​​ ಖಾತೆಯಲ್ಲಿ 1947 ರ ಕ್ಯಾಲೆಂಡರ್​ನ ಫೋಟೋ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಕ್ಯಾಲೆಂಡರ್​​ನಲ್ಲಿ ಆಗಸ್ಟ್‌ 15 ಶುಕ್ರವಾರ ಬಂದಿರುವುದನ್ನು ಕಾಣಬಹುದು. ಅದಲ್ಲದೇ 2025ರ ಕ್ಯಾಲೆಂಡರ್​​​ಗೂ ಈ ಕ್ಯಾಲೆಂಡರ್​​ಗೂ ಸಾಕಷ್ಟ ಹೋಲಿಕೆ ಇರುವುದು ಇದರ ವಿಶೇಷತೆ. ಈ ಕಾಕತಾಳೀಯ ಸಂಭವಿಸಲು ಸುಮಾರು 78 ವರ್ಷಗಳು ಬೇಕಾಯಿತು.

ಆಗಸ್ಟ್ 1947 ನೇಯ ಇಸ್ವಿಯ ಕ್ಯಾಲೆಂಡರ್
2025 ರಲ್ಲಿ ಪುನರಾವರ್ತನೆ ಆಗಿದೆ.

ಈ ಕ್ಯಾಲೆಂಡರ್​​​ ಮತ್ತೊಂದು ವಿಶೇಷತೆ ಏನೆಂದರೆ ಆಗಸ್ಟ್ 15 ರ ರಜೆ ಇರದ ಕೊನೆ ಯ ಕ್ಯಾಲೆಂಡರ್ ಕೂಡ ಇದು ಹೌದು. ಬೆಲ್ಲದ ಕಂಪೆನಿಯೊಂದರ ಕ್ಯಾಲೆಂಡರ್​​ ಎಂಬುದನ್ನು ಇಲ್ಲಿ ಕಾಣಬಹುದು. ಸದ್ಯ ಫೋಟೋ ಸೋಶಿಯಲ್​​ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರೊದಾಡಿತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries