HEALTH TIPS

1971ರಲ್ಲಿ ಪಾಕ್ ಸೈನ್ಯದಿಂದ ಘೋರ ಲೈಂಗಿಕ ಹಿಂಸಾಚಾರ: ವಿಶ್ವಸಂಸ್ಥೆಯಲ್ಲಿ ಭಾರತ

ವಿಶ್ವಸಂಸ್ಥೆ: 1971ರ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯು ಮಹಿಳೆಯರ ವಿರುದ್ಧ ಘೋರ ಲೈಂಗಿಕ ದೌರ್ಜನ್ಯ ಎಸಗಿತ್ತು. ಈ ಪ್ರವೃತ್ತಿಯು ಈಗಲೂ ನಿರ್ಭೀತಿಯಿಂದ ಮುಂದುವರಿದಿದೆ ಎಂದು ಭಾರತ ಕಿಡಿಕಾರಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ಬಹಿರಂಗ ಚರ್ಚೆಯಲ್ಲಿ ಮಾತನಾಡಿದ ಭಾರತದ 'ಚಾರ್ಜ್ ಡಿ ಅಫೇರ್ಸ್' ಎಲ್ಡೋಸ್‌ ಮ್ಯಾಥ್ಯು ಪೊನ್ನೂಸ್‌ ಅವರು, 1971ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ನಡೆದ ಲೈಂಗಿಕ ದೌರ್ಜನ್ಯವು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

'ಸಂಘರ್ಷದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆ' ವಿಷಯದ ಚರ್ಚೆ ಸಂದರ್ಭದಲ್ಲಿ, 1971ರಲ್ಲಿ ನಡೆದ ಸರಣಿ ಕಗ್ಗೊಲೆಗಳು ಮತ್ತು ಅತ್ಯಾಚಾರಗಳನ್ನು ಉಲ್ಲೇಖಿಸಿ ಮ್ಯಾಥ್ಯು ಅವರು ಈ ಹೇಳಿಕೆ ನೀಡಿದರು.

ಅಲ್ಪಸಂಖ್ಯಾತ ಸಮುದಾಯಗಳ ಸಾವಿರಾರು ದುರ್ಬಲ ಮಹಿಳೆಯರು ಮತ್ತು ಬಾಲಕಿಯರ ಅಹಹರಣ, ಕಳ್ಳಸಾಗಾಣಿಕೆ, ಬಾಲ್ಯವಿವಾಹ ಮತ್ತು ಬಲವಂತದ ವಿವಾಹ, ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರ ನಡೆದಿರುವುದು ವರದಿಯಾಗಿದೆ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ (ಒಎಚ್‌ಸಿಎಚ್‌ಆರ್) ಸೇರಿದಂತೆ ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

ಇಂಥ ಅಪರಾಧ ಎಸಗಿದವರು ಇಂದು ನ್ಯಾಯದ ಪ್ರವರ್ತಕರಂತೆ ವರ್ತಿಸುತ್ತಿರುವುದು ವಿಪರ್ಯಾಸ. ಅವರ ಕಪಟತನ ಮತ್ತು ಬೂಟಾಟಿಕೆಗೆ ಪುರಾವೆಗಳ ಅಗತ್ಯ ಇಲ್ಲ. ಹೀನ ಕೃತ್ಯವನ್ನು ಬಲವಾಗಿ ಖಂಡಿಸಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries