ಇದು ಕಳೆದ ವರ್ಷ ಇದೇ ತಿಂಗಳಲ್ಲಿ 5.77 ಕೋಟಿ ವಹಿವಾಟುಗಳಿಂದ ತೀವ್ರ ಏರಿಕೆಯನ್ನು ಸೂಚಿಸುತ್ತದೆ, ಇದು ಸೇವೆಗಳನ್ನು ಪಡೆಯಲು ಮತ್ತು ತಲುಪಿಸಲು ಕ್ಷೇತ್ರಗಳಲ್ಲಿ ತ್ವರಿತ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.
ಬೆಳವಣಿಗೆಯ ಪ್ರವೃತ್ತಿ ಸ್ಥಿರವಾಗಿದೆ, ಜುಲೈನ ಅಂಕಿಅಂಶಗಳು ಜೂನ್ 2025 ಕ್ಕೆ ಹೋಲಿಸಿದರೆ 22% ಹೆಚ್ಚಳವನ್ನು ತೋರಿಸುತ್ತವೆ. 2025 ರ ಜುಲೈ 1 ರಂದು 1.22 ಕೋಟಿಗೂ ಹೆಚ್ಚು ವಹಿವಾಟುಗಳನ್ನು ಕಾರ್ಯಗತಗೊಳಿಸಿದ ಈ ತಿಂಗಳು ಅತಿ ಹೆಚ್ಚು ಒಂದೇ ದಿನದ ಬಳಕೆಗೆ ಸಾಕ್ಷಿಯಾಯಿತು, ಇದು 2025 ರ ಮಾರ್ಚ್ 1 ರಂದು 1.07 ಕೋಟಿ ವಹಿವಾಟುಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.
ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು, ಹಣಕಾಸು ಸಂಸ್ಥೆಗಳು, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಟೆಲಿಕಾಂ ಆಪರೇಟರ್ಗಳು ಸೇರಿದಂತೆ 150 ಕ್ಕೂ ಹೆಚ್ಚು ಘಟಕಗಳು ಸುರಕ್ಷಿತ ಮತ್ತು ತಡೆರಹಿತ ಸೇವೆ ವಿತರಣೆಗಾಗಿ ಆಧಾರ್ನ ಎಐ ಚಾಲಿತ ಮುಖ ದೃಢೀಕರಣವನ್ನು ಬಳಸುತ್ತವೆ. ಈ ಸಿಸ್ಟಮ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಸಮಾಜ ಕಲ್ಯಾಣ ಕ್ಷೇತ್ರದಲ್ಲಿ, ಆಧಾರ್ ಮುಖ ದೃಢೀಕರಣವನ್ನು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ (ಎನ್‌ಎಸ್‌ಎಪಿ) ಸಂಯೋಜಿಸಲಾಗಿದೆ, ಇದು ಫಲಾನುಭವಿಗಳಿಗೆ ಸುರಕ್ಷಿತ, ಸಂಪರ್ಕವಿಲ್ಲದ ರೀತಿಯಲ್ಲಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.




