ತಿರುವನಂತಪುರಂ: ಕೇರಳದಲ್ಲಿ ಇನ್ನು ಮುಂದೆ ಕೇರಳದ ಸ್ವಂತ ಇಂಟರ್ನೆಟ್ ಆಗಿರುವ ಕೆ-ಪೋನ್ ಮೂಲಕ ಸ್ವಂತ ಒಟಿಟಿ ಸೇವೆಗಳು ಲಭ್ಯವಾಗಲಿದೆ. 29 ಒಟಿಟಿ ಪ್ಲಾಟ್‍ಫಾರ್ಮ್‍ಗಳು ಮತ್ತು 350 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‍ಗಳನ್ನು ಒಳಗೊಂಡಿರುವ ಕೆ-ಪೋನ್ ಸಿದ್ಧಪಡಿಸಿದ ಒಟಿಟಿ ಸೇವೆಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಸ್ಟ್ 21 ರಂದು ಸಂಜೆ 6.00 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ. ತಿರುವನಂತಪುರದ ಕನಕಕುನ್ನುವಿನ ನಿಶಾಗಂಧಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್‍ಕುಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆ-ಪೋನ್ ಎಂಡಿ ಡಾ. ಸಂತೋಷ್ ಬಾಬು ಐಎಎಸ್ (ನಿವೃತ್ತ) ವರದಿ ಮಂಡಿಸಲಿದ್ದಾರೆ. ಸಂಸದರಾದ ಎ.ಎ. ರಹೀಮ್, ಶಶಿ ತರೂರ್, ಶಾಸಕ ವಿ.ಕೆ. ಪ್ರಶಾಂತ್, ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಇತರರು ಶುಭಾಶಂಸನೆಗೈಯ್ಯುವರು.
ಇ & ಐಟಿ ಇಲಾಖೆಯ ವಿಶೇಷ ಕಾರ್ಯದರ್ಶಿ ಸೀರಾಮ್ ಸಾಂಬಶಿವರಾವ್ ಐಎಎಸ್ ಸ್ವಾಗತಿಸಲಿದ್ದಾರೆ ಮತ್ತು ಕೆ-ಪೋನ್ ಸಿಟಿಒ ಮುರಳಿ ಕಿಶೋರ್ ಉಪಸ್ಥಿತರಿರುವರು. ಅಧಿಕೃತ ಸಮಾರಂಭಗಳ ನಂತರ, ಖ್ಯಾತ ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ಸೂರಜ್ ಸಂತೋಷ್ ಮತ್ತು ಅವರ ತಂಡವನ್ನು ಒಳಗೊಂಡ ಸಂಗೀತ ಔತಣಕೂಟ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ನೀವು ಕೆ-ಪೋನ್‍ನ ಅಧಿಕೃತ ವೆಬ್‍ಸೈಟ್ www.kfon.in ನಲ್ಲಿ ಒದಗಿಸಲಾದ ನೋಂದಣಿ ಲಿಂಕ್ ಮೂಲಕ ಉಚಿತ ಪಾಸ್ ಪಡೆಯಬಹುದು.
ಗ್ರಾಹಕರು ಜಿಯೋ ಹಾಟ್‍ಸ್ಟಾರ್, ಅಮೆಜಾನ್ ಪ್ರೈಮ್ ಲೈಟ್, ಸೋನಿ ಲಿವ್, ಜೀ ಫೈವ್, ಫ್ಯಾನ್ ಕೋಡ್, ಡಿಸ್ಕವರಿ ಪ್ಲಸ್, ಹಂಗಾಮ ಟಿವಿ, ಪ್ಲೇಬಾಕ್ಸ್ ಟಿವಿ ಮತ್ತು ವಿವಿಧ ಡಿಜಿಟಲ್ ಚಾನೆಲ್‍ಗಳಂತಹ ಒಟಿಟಿಗಳನ್ನು ಕೆಫೆÇೀನ್ ಮೂಲಕ ಪ್ರವೇಶಿಸಲು ಸಾಧ್ಯವಾಗುತ್ತದೆ.
ಪ್ರಧಾನ ಕಾರ್ಯದರ್ಶಿ ಮತ್ತು ಕೆ-ಪೋನ್ ಎಂಡಿ ಡಾ. ಸಂತೋಷ್ ಬಾಬು ಐಎಎಸ್ (ನಿವೃತ್ತ) ಅವರು ಒಟಿಟಿ ಸೇರಿದಂತೆ ಪ್ಯಾಕೇಜ್ ಅನ್ನು ಗ್ರಾಹಕರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು. ಕ್ರೀಡೆ, ಚಲನಚಿತ್ರಗಳು, ಸಂಗೀತ, ಸರಣಿಗಳು ಮತ್ತು ಶೈಕ್ಷಣಿಕ ವಿಷಯದೊಂದಿಗೆ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ವಲಯವು ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು. ಕೆ-ಫೆÇೀನ್ ಸಹ ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ ಮತ್ತು ಒಟಿಟಿ ಸೇರಿದಂತೆ ಪ್ಯಾಕೇಜ್‍ನ ಸುಂಕವನ್ನು ಉದ್ಘಾಟನಾ ದಿನದಂದು ಘೋಷಿಸಲಾಗುವುದು.




