ಕುಂಬಳೆ: ಛಾಯಾಗ್ರಹಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಬಲಿಷ್ಠ ಸಂಘಟನೆಯಾದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ಇವರ ಜಿಲ್ಲಾ ಸಮ್ಮೇಳನ ನವೆಂಬರ್ 25 ಮತ್ತು 26 ರಂದು ಕಾಞಂಗಾಡ್‍ನಲ್ಲಿ ನಡೆಯಲಿದೆ. ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ ಕಾಞಂಗಾಡು ವ್ಯಾಪಾರಿ ಭವನದಲ್ಲಿ ಶುಕ್ರವಾರ ಜರಗಿತು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ ಸಭೆ ಉದ್ಘಾಟಿಸಿದರು. ಎಕೆಪಿಎ ಜಿಲ್ಲಾಧ್ಯಕ್ಷ ಟಿ.ವಿ. ಸುಗುಣನ್ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ರಾಜ್ಯ ಉಪಾಧ್ಯಕ್ಷ ಹಾಗೂ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಜೀಶ್ ಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕಾಞಂಗಾಡ್ ಘಟಕದ ಅಧ್ಯಕ್ಷ ಸಿ.ಕೆ. ಆಸಿಫ್, ಕಾಞಂಗಾಡ್ ಪ್ರೆಸ್ ಫೆÇೀರಂ ಅಧ್ಯಕ್ಷ ಫಸಲುರಹ್ಮಾನ್, ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾ ಉಪಾದ್ಯಕ್ಷ ಅನೂಪ್ ಚಂದೇರ, ಜಿಲ್ಲಾ ಪಿಆರ್‍ಒ ರಾಜೀವನ್ ರಾಜಪುರಂ, ಜಿಲ್ಲಾ ಛಾಯಾಗ್ರಹಣ ಕ್ಲಬ್ ಸಂಯೋಜಕ ಶ್ರೀಜಿತ್ ನಿಲಾಯಿ, ಜಿಲ್ಲಾ ಕ್ಷೇಮಸಮಿತಿ ಅದ್ಯಕ್ಷ ಬಿ.ಎ. ಶರೀಫ್, ಜಿಲ್ಲಾ ಕ್ರೀಡಾ ಕ್ಲಬ್ ಸಂಯೋಜಕ ರತೀಶ್ ರಾಮು, ಜಿಲ್ಲಾ ರಕ್ತದಾನ ಕ್ಲಬ್ ಸಂಯೋಜಕ ಅನಿಲ್ ಕಾಮಲೋನ್, ಕಾಞಂಗಾಡ್ ವಲಯ ಅದ್ಯಕ್ಷ ರಮೇಶನ್ ಮಾವುಂಗಾಲ್ ಕಾಸರಗೋಡು ವಲಯ ಅಧ್ಯಕ್ಷ ಎಂ.ಕೆ. ಸನ್ನಿ, ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ, ನೀಲೇಶ್ವರ ವಲಯ ಕಾರ್ಯದರ್ಶಿ ದಿನೇಶನ್ ಒಳವರ, ಮಾಜಿ ಜಿಲ್ಲಾ ಪದಾಧಿಕಾರಿಗಳಾದ ಎನ್.ಎ. ಭರತನ್, ಎನ್.ವಿ. ಮನೋಹರನ್ ಮಾತನಾಡಿದರು. ಎಕೆಪಿಎ ಜಿಲ್ಲಾ ಕಾರ್ಯದರ್ಶಿ ವಿ.ಎನ್. ರಾಜೇಂದ್ರನ್ ಸ್ವಾಗತಿಸಿ, ಜಿಲ್ಲಾ ಖಜಾಂಚಿ ಎನ್.ಕೆ. ಪ್ರಜಿತ್ ವಂದಿಸಿದರು.
ಜಿಲ್ಲಾ ಸಮ್ಮೇಳನದ ಅಂಗವಾಗಿ ಟ್ರೇಡ್ ಫೇರ್, ಛಾಯಾಚಿತ್ರ ಪ್ರದರ್ಶನ, ಛಾಯಾಗ್ರಹಣ ಸ್ಪರ್ಧೆ, ಪ್ರತಿನಿಧಿಗಳ ಸಮ್ಮೇಳನ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ. ಸಮ್ಮೇಳನದ ಸ್ವಾಗತ ಸಮಿತಿ ಪೆÇೀಷಕರಾಗಿ ಕಾಞಂಗಾಡ್ ಶಾಸಕ ಇ. ಚಂದ್ರಶೇಖರನ್, ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ, ಎಕೆಪಿಎ ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ ಅವರನ್ನು ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎಕೆಪಿಎ ಜಿಲ್ಲಾಧ್ಯಕ್ಷ ಟಿ.ವಿ. ಸುಗುಣನ್ ಮತ್ತು ಸಂಚಾಲಕರಾಗಿ ಜಿಲ್ಲಾ ಕಾರ್ಯದರ್ಶಿ ವಿ.ಎನ್. ರಾಜೇಂದ್ರನ್ ಅವರನ್ನು ಆಯ್ಕೆ ಮಾಡಲಾಯಿತು.




.jpg)
