ಮಂಜೇಶ್ವರ: ರಾಯರ ಭಕ್ತರು ಮಂಜೇಶ್ವರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ ಆಚರಣೆಯು ಆ. 11 ರಂದು ಸೋಮವಾರ ವಿವಿಧ, ವೈದಿಕ ಕಾರ್ಯಕ್ರಮಗಳೊಂದಿಗೆ ಮಂಜೇಶ್ವರ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದ್ದು, ಅಂದು ಬೆಳಗ್ಗೆ 9.00 ರಿಂದ ಸ್ಥಳ ಶುದ್ಧಿ, ಪ್ರಾರ್ಥನೆ, ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಲಘು ಉಪಾಹಾರ ವಿತರಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದೆ, ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಸಾದ ಸ್ವೀಕರಿಸಬೇಕಾಗಿ ರಾಯರ ಭಕ್ತರು ಮಂಜೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




