ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದಲ್ಲಿ ಕ್ಷೇತ್ರದ ಪದ್ಮಶಾಲಿ ಮಹಿಳಾ ವೇದಿಕೆ ವತಿಯಿಂದ ಇಪ್ಪತ್ತೊಂದನೇ ವರ್ಷದ ಶ್ರೀ ವರ ಮಹಾಲಕ್ಷ್ಮಿ ವ್ರತಾಚರಣೆಯನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.ಕ್ಷೇತ್ರದ ಪ್ರಧಾನ ಅರ್ಚಕ ರಾಜೇಶ್ ಭಟ್ ಕೋಡಪದವು ಇವರ ನೇತೃತ್ವದಲ್ಲಿ ಚಂದ್ರ ಭಟ್ ಬಡಾಜೆ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು.





