ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್‍ಸಿಂಗ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ವಾರ್ಷಿಕೋತ್ಸವ ಹಾಗೂ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಭಾನುವಾರ ಉದಯಗಿರಿ ಶಾಲಾ ವಠಾರದಲ್ಲಿ ಜರಗಿತು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ಉದಯಗಿರಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ದೀಪಬೆಳಗಿಸಿ ಉದ್ಘಾಟಿಸಿದರು. ನಂತರ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ಊರಿನ ಯುವಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನದಾನ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ ಮಾಸ್ತರ್, ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಕೆ.ಚಂದ್ರಶೇಖರ ಶೆಟ್ಟಿ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಪುತ್ತೂರು, ಸಿಪಿಐ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಶ್ರೀಕಾಂತ್, ಉದಯಗಿರಿ ಶಾಲಾ ಅಧ್ಯಾಪಕ ನವೀನ್ ಕುಮಾರ್ ಪಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇಕ್ಕೇರಿ ಶ್ರೀಶಂಕರನಾರಯಣ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ವಾಂತಿಚ್ಚಾಲು ಮುಖ್ಯ ಭಾಷಣಗೈದು, ಗ್ರಾಮೀಣ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಜನರಲ್ಲಿ ಒಗ್ಗಟ್ಟಿನ ಮಂತ್ರವನ್ನು ಜಪಿಸುವಂತೆ ಮಾಡುವಲ್ಲಿ ಭಗತ್‍ಸಿಂಗ್ ಕ್ಲಬ್ಬಿನ ಸದಸ್ಯರ ಕಾಳಜಿ ಶ್ಲಾಘನೀಯವಾಗಿದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ, ಗ್ರಾಮದ ಸಾಧಕರನ್ನು ಗೌರವಿಸುವ ಮೂಲಕ ನಮ್ಮ ಸಂಸ್ಕøತಿಗೆ ಪೂರಕವಾದ ಚಟುವಟಿಕೆಗಳು ನಿರಂತರ ನಡೆದುಬರಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಉದಯಗಿರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಕುಮಾರ ಬಿ. ಶುಭಾಶಂಸನೆಗೈದರು. ಜನಾನುರಾಗಿ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅವರು ಬಹುಮಾನ ವಿತರಿಸಿದರು. ಕ್ಲಬ್‍ನ ಅಧ್ಯಕ್ಷ ಕೃಷ್ಣಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ವಸಂತಕುಮಾರ್ ವಂದಿಸಿದರು. ಮೊಸರು ಕುಡಿಕೆ, ಮಡಿಕೆ ಒಡೆಯುವುದು, ಲಿಂಬೆ ಚಮಚ, ನಾಣ್ಯ ಹೆಕ್ಕುವುದು, ಸೂಜಿ ನೂಲು ಓಟ, ಬೆಲೂನ್ ಒಡೆಯುವುದು ಮೊದಲಾದ ಸ್ಪರ್ಧೆಗಳಲ್ಲಿ ಜನರು ಪಾಲ್ಗೊಂಡರು.

.jpg)
