ಮಂಜೇಶ್ವರ: ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲು ಕಟ್ಟೆ ಇದರ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಂದು ಬುಧವಾರದಿಂದ 29 ಶುಕ್ರವಾರದವರೆಗೆ ಭಜನೆ ಹಲವು ಆಟೋಟ ಸ್ಪರ್ಧೆ, ರಸಪ್ರಶ್ನೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಆ ಪ್ರಯುಕ್ತ ಆ.27 ರಂದು ಬೆಳಿಗ್ಗೆ 9.30ಕ್ಕೆ 45 ಕೆ.ಜಿ ವಿಭಾಗ ಕಬಡ್ಡಿ ಪಂದ್ಯಾಟ, 28 ರಂದು ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ವರ್ಕಾಡಿ ಮೀಂಜ ಪಂಚಾಯತಿಗಳಿಗೆ ಒಳಪಟ್ಟವರಿಗೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

