ಕಾಸರಗೋಡು: ಸ್ವದೇಶಿ ವಿಜ್ಞಾನ ಚಳವಳಿಯ ಸಹಯೋಗದೊಂದಿಗೆ 32ನೇ ಸ್ವದೇಶಿ ವಿಜ್ಞಾನ ಕಾಂಗ್ರೆಸ್ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ನ. 6ರಿಂದ 8ರ ವರೆಗೆ ನಡೆಯಲಿದೆ.
ವಿಕಸಿತ ಭಾರತಕ್ಕಾಗಿ ಪರಿವರ್ತನಾ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂಬ ವಿಷಯದ ಮೇಲೆ ಮೂರು ದಿವಸಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ವಿವಿಧ ವಿಷಯಗಳ ಕುರಿತು 16 ತಾಂತ್ರಿಕ ಅಧಿವೇಶನಗಳ ಜತೆಗೆ ಸಿ.ವಿ. ರಾಮನ್ ಮತ್ತು ಪಿ. ಪರಮೇಶ್ವರನ್ ಸ್ಮಾರಕ ಉಪನ್ಯಾಸಗಳು ನಡೆಯಲಿವೆ. ವಿವಿಧ ವಿಷಯಗಳ ಬಗ್ಗೆ ಪ್ರಬಂಧಗಳನ್ನು ಸೆಪ್ಟೆಂಬರ್ 30 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಅವಧಿಯಲ್ಲೂ ಅತ್ಯುತ್ತಮ ಪ್ರಬಂಧಕ್ಕಾಗಿ ಯುವ ವಿಜ್ಞಾನ ಪ್ರಶಸ್ತಿ ಅತ್ಯುತ್ತಮ ಮೌಖಿಕ ಪ್ರಸ್ತುತಿ ಮತ್ತು ಪೆÇೀಸ್ಟರ್ ಪ್ರಸ್ತುತಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ, www.ssckerala.com ಮತ್ತು www.cukerala.ac.in ಗೆ ಭೇಟಿ ನೀಡಬಹುದು.
32ನೇ ಸ್ವದೇಶಿ ವಿಜ್ಞಾನ ಕಾಂಗ್ರೆಸ್ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಬ್ರೋಶರ್ ಬಿಡುಗಡೆಗೊಳಿಸಿ ಮಾತನಾಡಿ, ವಿಜ್ಞಾನ ಕಾಂಗ್ರೆಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಯಲು ಮತ್ತು ಸಂವಹನ ನಡೆಸಲು ಒಂದು ಅವಕಾಶವಾಗಿದೆ ಎಂದು ತಿಳಿಸಿದರು. ಪ್ರಭಾರ ರಿಜಿಸ್ಟ್ರಾರ್ ಡಾ. ಆರ್. ಜಯಪ್ರಕಾಶ್ ವೆಬ್‍ಸೈಟ್ ಉದ್ಘಾಟಿಸಿದರು. ವಿಜ್ಞಾನ ಭಾರತಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಪ್ರವೀಣ್ ರಾಮದಾಸ್, ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಅಬ್ಗಾ ರವೀಂದ್ರನಾಥ್ ಬಾಬು, ಸಿಪಿಸಿಆರ್‍ಐ ಹಿರಿಯ ವಿಜ್ಞಾನಿ ಡಾ.ಕೆ.ಮುರಳಿ ಗೋಪಾಲ್, ಪ್ರೊ. ಗೋಪಿನಾಥನ್ ಮೊದಲಾದವರು ಉಪಸ್ಥಿತರಿದ್ದರು ವಿಜ್ಞಾನ ಕಾಂಗ್ರೆಸ್ ಸ್ಥಳೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆಎ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಜಾಸ್ಮಿನ್ ಎಂ. ಶಾ ವಂದಿಸಿದರು.





