ಕಾಸರಗೋಡು: ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಮೀನುಗಾರಿಕೆ ಇಲಾಖೆ ಜಂಟಿಯಾಗಿ ಅಚ್ಚಾಂತುರುತ್ತಿ ಕೋಟ್ಟಪುರ ಸೇತುವೆಯ ಬಳಿಯಿರುವ ಸಾರ್ವಜನಿಕ ಜಲಮೂಲದಲ್ಲಿ ಕರಿಮೀನಿನ(ಪರ್ಲ್ ಸ್ಪಾಟ್ ಫಿಶ್)ಮರಿಗಳ ಬಿತ್ತನೆ ಕಾರ್ಯ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್ ಹಿನ್ನೀರಿನಲ್ಲಿ ಕರಿಮೀನು ಮರಿಗಳನ್ನು ಅಳವಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಚೆರುವತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಟಿ.ವಿ. ಶ್ರೀಜಿತ್ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರಿಕೆ ಇಲಾಖೆ ವಿಸ್ತರಣಾಧಿಕಾರಿ ಅರುಣೇಂದು ರಾಮಕೃಷ್ಣನ್ ಸ್ವಾಗತಿಸಿದರು ಮತ್ತು ಮೀನುಗಾರಿಕೆ ಅಧಿಕಾರಿ ಎಂ. ಶಿಬಿನಾ ಧನ್ಯವಾದ ಅರ್ಪಿಸಿದರು.





