ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿರುವ ಲೋಕೋಪಯೋಗಿ ಇಲಾಖಾ ಸಂಕೀರ್ಣದ ವಠಾರದಲ್ಲಿ ಆರ್‍ಡಿಒ ಕಚೇರಿಗಾಗಿ ನಿರ್ಮಿಸಲಾದ ನೂತನ ರಾಜ್ಯ ಕಂದಾಯ ಸಚಿವ ಕೆ. ರಾಜನ್ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುವರು.
ನಂತರ ಸಚಿವರು ಕಾಸರಗೋಡು ನಗರಸಭಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಹಕ್ಕುಪತ್ರ ಮೇಳದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡುವರು. ಈ ಸಂದರ್ಭ ಅತ್ಯಂತ ಬಡವರಿಗೆ ಹಕ್ಕುಪತ್ರ ವಿತರಣೆ'ಆಪರೇಷನ್ ಸ್ಮೈಲ್' ಮತ್ತು ಇತರ ಹಕ್ಕುಪತ್ರಗಳ ಕುರಿತು ಚರ್ಚಿಸಲಿದ್ದಾರೆ. 150 ವರ್ಷಗಳಿಂದ ದಾಖಲೆಗಳಿಲ್ಲದೆ ಭೂಮಿಯನ್ನು ಹೊಂದಿದ್ದ ಕೊರಗ ಸಮುದಾಯದ ಕುಟುಂಬಗಳಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರ ಯೋಜನೆಯಾದ ಆಪರೇಷನ್ ಸ್ಮೈಲ್ ಮೂಲಕ ಅವರ ಭೂಮಿಯ ಮೇಲಿನ ಹಕ್ಕನ್ನು ನೀಡಲಾಗುವುದು.




