ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನವು ಆ. 23ರಂದು ಬೆಳಗ್ಗೆ 10ಕ್ಕೆ ಕಾಸರಗೋಡಿನ ಬೀರಂತ ಬೈಲಿನಲ್ಲಿರುವ 'ಕನ್ನಡ ಅಧ್ಯಾಪಕ ಭವನ'ದಲ್ಲಿ ನಡೆಯುವುದು.
ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಸವಿತ. ಪಿ ಸಮ್ಮೇಳನ ಉದ್ಘಾಟಿಸುವರು. ಕಾಸರಗೋಡು ಉಪ ಜಿಲ್ಲಾ ಘಟಕ ಅಧ್ಯಕ್ಷೆ ಯಶೋದ ಕೆ .ಎ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್, ಬೇಕಲ ಜಿ ಎಫ್ ಎಚ್‍ಸ್‍ಎಸ್ ಪ್ರಾಂಶುಪಾಲ ಅರವಿಂದ.ಕೆ, ಕಾಸರಗೋಡು ಉಪ ಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್, ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ .ಎ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಪುಂಡರೀಕಾಕ್ಷ ಆಚಾರ್ಯ, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ, ಬೇಕಲ- ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುಮಾರಿ, ಕೇಂದ್ರ ಸಮಿತಿ ಲೆಕ್ಕಪರಿಶೋಧಕ ವಿಠಲ ಅಡ್ವಳ, ಕೇಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು.ಕೆ, ಕಾಸರಗೋಡು ಉಪಜಿಲ್ಲಾ ಉಪಾಧ್ಯಕ್ಷೆ ರೋಹಿತಾಕ್ಷಿ , ಬೇಕಲ-ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ, ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್ ಕೆ. ವಿ ಪಾಲ್ಗೊಳ್ಳುವರು.
ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮರಣಾರ್ಥ ಶಾಲಾ ಮಟ್ಟದಲ್ಲಿ ನಡೆಸಲಾದ ಕನ್ನಡ ವಾಚನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು 2024 -25 ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಲೆಸ್ಸೆಸ್, ಯುಎಸ್ಸೆಸ್ ವಿಜೇತರಿಗೆ ಅಭಿನಂದನೆ ನಡೆಯುವುದು. ಬೇಕಲ-ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ಪ್ರತಿನಿಧಿ ಸಮ್ಮೇಳನ ಜರುಗಲಿದೆ.
ಕಾಸರಗೋಡು ಉಪ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ . ಯಂ, ಬೇಕಲ -ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ ವರದಿ, ಉಪಜಿಲ್ಲಾ ಕೋಶಾಧಿಕಾರಿ ಕುಶ. ಪಿ. ಎಲ್,ಶ್ರೀವಿದ್ಯಾ ಲೆಕ್ಕಪತ್ರ ಮಂಡಿಸುವರು. ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ.ಎ, ಉಪಾಧ್ಯಕ್ಷೆ ಶ್ರೀಲತ. ಕೆ, ಜತೆಕಾರ್ಯದರ್ಶಿ ವಿನೋದ್ ರಾಜ್ ಪಿ .ಕೆ, ಕಾಸರಗೋಡು ಉಪಜಿಲ್ಲಾಧ್ಯಕ್ಷೆ ಯಶೋದ.ಕೆ.ಎ, ಉಪಾಧ್ಯಕ್ಷೆ ಸುರೇಖಾ.ಕೆ, ಜತೆ ಕಾರ್ಯದರ್ಶಿಗಳಾದ ಶಾಂತಾ,ಸುಭಾಷಿಣಿ ಉಪಸ್ಥಿತರಿರುವರು. ಉಪಜಿಲ್ಲೆಗಳ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.




