HEALTH TIPS

ಮಿಜೋರಾಂನಲ್ಲಿ ಕಳ್ಳಸಾಗಣೆ; ₹350 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ, ಬಂಧನ

ಐಜ್ವಾಲ್: ಮಿಜೋರಾಂ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಸುಮಾರು ₹350 ಕೋಟಿ ಮೌಲ್ಯದ ಕ್ರಿಸ್ಟಲ್‌ ಮೆಥಾಂಫೆಟ್‌ಮೈನ್‌ ಹಾಗೂ ಹೆರಾಯಿನ್‌ ವಶ‍ಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಐಜ್ವಾಲ್‌ನಲ್ಲಿರುವ ಮಾದಕವಸ್ತು ನಿಗ್ರಹ ವಿಶೇಷ ಪೊಲೀಸ್‌ ಠಾಣೆ ಸಿಬ್ಬಂದಿ ಹಾಗೂ ಅಪರಾಧ ತನಿಖಾ ಇಲಾಖೆಯ (ವಿಶೇಷ ವಿಭಾಗ) ಸಿಬ್ಬಂದಿ ಆಗಸ್ಟ್‌ 1ರಂದು ಈ ಕಾರ್ಯಾಚರಣೆ ನಡೆಸಿದ್ದರು.

ಐಜ್ವಾಲ್‌ಗೆ ತೆರಳುತ್ತಿದ್ದ ಲಾರಿಯೊಂದನ್ನು ಒಂದನ್ನು ತಡೆದು ಪರಿಶೀಲಿಸಿದಾಗ ₹300 ಕೋಟಿ ಮೌಲ್ಯದ 20.304 ಕೆಜಿ ಕ್ರಿಸ್ಟಲ್‌ ಮೆಥಾಂಫೆಟಮೈನ್‌ ಹಾಗೂ 128 ಸಾಬೂನು ಡಬ್ಬಿಗಳಲ್ಲಿ ತುಂಬಿಸಿದ್ದ ₹49.56 ಕೋಟಿ ಮೌಲ್ಯದ 1.652 ಕೆಜಿ ಹೆರಾಯಿನ್‌ ಪತ್ತೆಯಾಗಿದೆ.

ಈ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಚಾಲಕ ಬಿ. ಲಲ್ತಾಜುವಾಲಾ ಎಂಬವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries