HEALTH TIPS

ಬ್ರಿಟನ್‌; ಪ್ಯಾಲೆಸ್ಟೀನ್‌ ಪರ ಸಂಘಟನೆಗೆ ಬೆಂಬಲ: 474 ಮಂದಿ ಬಂಧನ

ಲಂಡನ್‌ (PTI): ನಿಷೇಧಿತ ಪ್ಯಾಲೆಸ್ಟೀನ್‌ ಪರ ಸಂಘಟನೆ 'ಪ್ಯಾಲೆಸ್ಟೀನ್‌ ಆಯಕ್ಷನ್‌'ಗೆ ಬೆಂಬಲ ನೀಡಿ ಬ್ರಿಟನ್‌ನ ಸಂಸತ್ತಿನ ಆವರಣದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಒಟ್ಟು 474 ಜನರನ್ನು ಶನಿವಾರ ಬಂಧಿಸಲಾಗಿದೆ ಎಂದು ಲಂಡನ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟು ಜನರನ್ನು ಬಂಧಿಸಿರುವುದು ಇದೇ ಮೊದಲು.

'ಪ್ಯಾಲೆಸ್ಟೀನ್‌ ಆಯಕ್ಷನ್‌' ಸಂಘಟನೆಯನ್ನು ನಿಷೇಧಿಸಿ ಬ್ರಿಟನ್‌ ಸರ್ಕಾರ ಜುಲೈ 5ರಂದು ಆದೇಶ ಹೊರಡಿಸಿತು. ಈ ಸಂಘಟನೆಗೆ ಬೆಂಬಲ ನೀಡುವುದು ಕ್ರಿಮಿನಲ್‌ ಅಪರಾಧವೆಂದು, ಬೆಂಬಲ ನೀಡಿದರೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಘೋಷಿಸಿತು.

ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ್ದಕ್ಕಾಗಿ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ 466 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಬಹುತೇಕರು, ಪ್ಯಾಲೆಸ್ಟೀನ್‌ ಪರ ಬರಹಗಳಿರುವ ಫಲಕಗಳನ್ನು ಹಿಡಿದಿದ್ದರು. ಪೊಲೀಸ್‌ ಅಧಿಕಾರಿಗಳನ್ನು ನಿಂದಿಸಿರುವುದು ಸೇರಿದಂತೆ ಇತರ ಆರೋಪಗಳ ಮೇಲೆ 8 ಮಂದಿಯನ್ನು ಬಂಧಿಸಲಾಗಿದೆ.

'ಪ್ಯಾಲೆಸ್ಟೀನ್‌ ಆಯಕ್ಷನ್‌' ಸಂಘಟನೆಯು ಹಿಂಸೆಯಲ್ಲಿ ತೊಡಗಿದ್ದು, ಇದರಿಂದ ಹಲವರು ಗಾಯಗೊಂಡರು. ಸಂಘಟನೆಯಿಂದ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಭದ್ರತೆಗಾಗಿ ಇದನ್ನು ನಿಷೇಧಿಸಲಾಯಿತು' ಎಂದು ಗೃಹ ಕಾರ್ಯದರ್ಶಿ ಯಿವೆಟ್‌ ಕೂಪರ್‌ ಹೇಳಿದರು. ಕಾರ್ಯಾಚರಣೆ ನಡೆಸಿ ಅನೇಕರನ್ನು ಬಂಧಿಸಿದ ಪೊಲೀಸರನ್ನು ಅವರು ಶ್ಲಾಘಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries