ನಜಾಫ್: ಇರಾಕ್‌ನಲ್ಲಿ ಕ್ಲೋರಿನ್ ಅನಿಲ ಸೇವಿಸಿ 600ಕ್ಕೂ ಹೆಚ್ಚು ಯಾತ್ರಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಾವಿರಾರು ಮಂದಿ ಇದನ್ನು ಸೇವಿಸಿದ್ದಾರೆ. ಈ ಪೈಕಿ ಸುಮಾರು 600 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.
ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ನಜಾಫ್ ಹಾಗೂ ಕರ್ಬಾಲಾ ಯಾತ್ರಾ ಸ್ಥಳಗಳಿಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಸಲ ಸುಮಾರು 70 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ.
ಸಾವಿರಾರು ಯಾತ್ರಿಕರು ನೀರಿನ ಶುದ್ಧೀಕರಣ ಘಟಕದ ಸಮೀಪ ಶನಿವಾರ ರಾತ್ರಿ ತಂಗಿದ್ದರು. ಈ ವೇಳೆ ಅನಿಲ ಸೋರಿಕೆಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ತಿಳಿದ ಕೂಡಲೇ ಸ್ಥಳೀಯ ಸರ್ಕಾರ, ನೀರು ಶುದ್ಧೀಕರಣ ಘಟಕದ ಸುತ್ತಲೂ ಜನರಿಗೆ ನಿರ್ಬಂಧ ವಿಧಿಸಿದೆ. ಕೂಡಲೇ ತಂತ್ರಜ್ಞರು ಕ್ಲೋರಿನ್ ಗ್ಯಾಸ್ ಸೋರಿಕೆಯನ್ನು ತಡೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.




