ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವತಿಯಿಂದ ರಾಮಾಯಣ-ಹರಿಕಥಾ ಸತ್ಸಂಗ ಕಾರ್ಯಕ್ರಮ ಆ. 4ರಿಂದ 6ರ ವರೆಗೆ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ. ಈ ಮೂರು ದಿವಸಗಳಲ್ಲಿ ರಾಮಾಯಣ ಕತೆಯನ್ನಾಧರಿಸಿದ ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಲಿರುವುದು.
ಆ. 4ರಂದು ಸಂಜೆ 5ಕ್ಕೆ ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ಸಮಾರಂಭಕ್ಕೆ ಚಾಲನೆ ನೀಡುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಉಪಸ್ಥಿತಿತರಿರುವರು. ಈ ಸಂದರ್ಭ ಲೇಖನ ಆಚಾರ್ಯ ನಲ್ಕ ಅವರಿಂದ 'ಪತಿತೋದ್ಧಾರಕ'ಹರಿಕಥಾ ಸತ್ಸಂಗ ನಡೆಯುವುದು.
5ರಂದು ಸಂಜೆ 5ಕ್ಕೆ ಧಾರ್ಮಿಕ ಮುಂದಾಳು ಮೀರಾ ಕಾಮತ್ ಅವರ ಉಪಸ್ಥಿತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕೌನ್ಸೆಲಿಂಗ್ ಸದಸ್ಯ ಶಶಿಧರ ಕೂಡ್ಲು ಐ.ಎ.ಎಸ್ ದೀಪ ಪ್ರಜ್ವಲನನೆ ನಡೆಸುವರು. ಈ ಸಂದರ್ಭ ಮೇಧಾ ಭಟ್ ನಾಯರ್‍ಪಳ್ಳ ಅವರಿಂದ ಸೀತಾ ಕಲ್ಯಾಣ ಹರಿಕತೆ ನಡೆಯುವುದು. 6ರಂದು ಸಂಜೆ 5ಕ್ಕೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಶಿವರಾಯ ಭಟ್ ಮುಲ್ಳೇರಿಯ ಅವರ ಉಪಸ್ಥಿತಿಯಲ್ಲಿ ಯಕ್ಷಗಾನ ಅರ್ಥಧಾರಿ, ವೈದ್ಯ ಡಾ, ಕೆ.ಎನ್ ಬಲ್ಲಾಳ್ ಸಮಾರಂಭಕ್ಕೆ ಚಾಲನೆ ನೀಡುವರು. ಶ್ರದ್ಧಾ ಭಟ್ ನಾಯರ್ ಪಳ್ಳ ಅವರಿಂದ'ಸುಂದರ ಕಾಂಡ'ಹರಿಕಥಾ ಸತ್ಸಂಗ ನಡೆಯುವುದು.




