HEALTH TIPS

ಸ್ವಸಾಮಥ್ರ್ಯ, ಆತ್ಮವಿಶ್ವಾಸದೊಂದಿಗೆ ಮುನ್ನಡೆದಾಗ ಜೀವನದಲ್ಲಿ ಯಶಸ್ಸು -ಡಾ.ಗುರುರಾಜ ಕರಜಗಿ

ಕಾಸರಗೋಡು: ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಮಥ್ರ್ಯದಲ್ಲಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂಬುದಾಗಿ ಶಿಕ್ಷಣ ತಜ್ಞ ಮತ್ತು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‍ನ ಸಿಇಒ ಡಾ. ಗುರುರಾಜ್ ಕರಜಗಿ ತಿಳಿಸಿದ್ದಾರೆ. 

ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಹೊಸ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ಸ್ನಾತಕೋತ್ತರ ಪದವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಎರಡು ದಿವಸಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಅಂಕಗಳನ್ನು ಗಳಿಸುವುದು ಮತ್ತು ಉದ್ಯೋಗ ಪಡೆಯುವುದು ಮಾತ್ರ ಶಿಕ್ಷಣದ ಗುರಿಯಾಗಿರಬಾರದು. ಹೆಚ್ಚಿನ ಅಂಕ ಪಡೆದವರೂ ಅನೇಕ ಮಂದಿ ಜೀವನದಲ್ಲಿ ವಿಫಲರಾಗುತ್ತಾರೆ. ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸಿಕೊಂಡು ಮುಂದುವರಿಯಲು ಸಾಧ್ಯವಾದಾಗ ಜೀವನದಲ್ಲೂ ಯಶಸ್ಸು ಪಡೆಯಲು ಸಾಧ್ಯವಾಗುವುದಾಗಿ ತಿಳಿಸಿದರು.

ಕೇಂದ್ರೀಯ ವಿಶ್ವ ವಿದ್ಯಾಲಯ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ವಿದ್ಯಾರ್ಥಿಗಳು ಅಧ್ಯಯನ ಮಾಡಲು ಮತ್ತು ಮುಂದುವರಿಯಲು ಎಲ್ಲಾ ಬೆಂಬಲವನ್ನು ವಿಶ್ವವಿದ್ಯಾನಿಲಯ ಒದಗಿಸುತ್ತಿದ್ದು, ಇಂತಹ ಅವಕಾಶಗಳನ್ನು ಬಳಸಿಕೊಮಡು, ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ಮುಂದುವರಿಯಲು ವಿದ್ಯಾರ್ಥಿಗಳು ಮುಂದಾಘಬೇಕು ಎಂದು ತಿಳಿಸಿದರು.    ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಡೀನ್ ಶೈಕ್ಷಣಿಕ ಪ್ರಾಧ್ಯಾಪಕ ಅಮೃತ್ ಜಿ. ಕುಮಾರ್, ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ದ್ಯಾರ್ಥಿಗಳ ಕಲ್ಯಾಣ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಸ್ವಾಗತಿಸಿದರು. ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್ ವಂದಿಸಿದರು. ಶಿಕ್ಷಕರ ನೇತೃತ್ವದಲ್ಲಿ ವಿವಿಧ ತರಗತಿ ನಡೆಯಿತು.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries