ಮಂಜೇಶ್ವರ: ಎಲಿಯಾಣ ತಿಲಕನಗರದ ಸ್ಪಂದನ ಆಟ್ರ್ಸ್ ಆಂಡ್ ಸ್ಪೋರ್ಟ್ ಕ್ಲಬ್ ವತಿಯಿಂದ 4ನೇ ವರ್ಷದ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಗುರುವಾರ ಬೆಳಗ್ಗೆ 6ಕ್ಕೆ ಗಣಪತಿ ಪ್ರತಿಷ್ಠೆ ಗಣಪತಿ ಹವನ ನಡೆದು ಶ್ರೀ ಶಾಸ್ತ ಭಜನಾ ಮಂದಿರ ಚಿನಾಲದ ವತಿಯಿಂದ ಭಜನಾ ಸೇವೆ ನಡೆಯಿತು. ಬಳಿಕ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದವು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉತ್ತಮ ಕೃಷಿ ಕಾರ್ಮಿಕರಿಗೆ ನೀಡುವ ಈ ವರ್ಷದ ' ಸ್ಪಂದನ ಗ್ರಾಮೀಣ ಪ್ರಶಸ್ತಿ' ಕುಂಞÂ್ಞ ಪೂಜಾರಿ ಹಾಗೂ ಬಾಗಿ ದಂಪತಿಗಳಿಗೆ ನೀಡಿ ಗೌರವಿಸಲಾಯಿತು. ಗ್ರಾಮದ ವಿವಿಧ ವಲಯಗಳಲ್ಲಿ ಸೇವೆಯನ್ನು ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮೀಯಪದವು ಶಾಲೆಯ ನಿವೃತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್, ಹಿರಿಯ ಕೃಷಿಕ ಮಮುಂಞÂ ಹಾಜಿ ಚಿನಾಲ, ಅಣ್ಣು ಮೂಲ್ಯ, ಮೀಂಜ ಪಂಚಾಯತಿ ಸದಸ್ಯೆ ಸರಸ್ವತಿ, ಕಣ್ಣೂರು ವಿಶ್ವವಿದ್ಯಾನಿಲಯ ಬಿ. ಎ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ದೀಕ್ಷಿತ, ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ ಬಸವರಾಜ್ ಇವರನ್ನು ಸನ್ಮಾನಿಸಲಾಯಿತು. ಗರಿಷ್ಠ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಮಹಾಪೂಜೆ ,ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 3ಕ್ಕೆ ಗಣಪತಿ ಮೂರ್ತಿಯ ನಿಮಂಜನ ಶೋಭಾಯಾತ್ರೆ ಚಿನಾಲ ಶಾಸ್ತ ಅಯ್ಯಪ್ಪ ಭಜನಾ ಮಂದಿರ, ಕುಳೂರು ದಾರಿಯಾಗಿ ಸಾಗಿ ಪೆÇಯ್ಯೆಲು ಹೊಳೆಯಲ್ಲಿ ನಡೆಯಿತು.







