ಕಣ್ಣೂರು: ಕಣ್ಣಾಪುರಂ ಕೀಜಾರದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈ ಘಟನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಸ್ಫೋಟದಲ್ಲಿ ಮನೆ ಸಂಪೂರ್ಣವಾಗಿ ನಾಶವಾಗಿದೆ. ಅಪಘಡದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ.ಕಣ್ಣಾಪುರಂ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ಪರಿಣಾಮ ಹತ್ತಿರದ ಮನೆಗಳ ಬಾಗಿಲುಗಳು ಮುರಿದು ಗೋಡೆಗಳಲ್ಲಿ ಬಿರುಕುಗಳು ಉಂಟಾಗಿವೆ. ಅಪಘಾತದ ಸ್ಥಳದಲ್ಲಿ ಕೆಲವಷ್ಟು ಸ್ಫೋಟಗೊಳ್ಳದ ಸ್ಫೋಟಕಗಳು ಸಹ ಪತ್ತೆಯಾಗಿವೆ.
ಸ್ಫೋಟದಲ್ಲಿ ಹತ್ತಿರದ ಮನೆಗಳು ಸಹ ಹಾನಿಗೊಳಗಾಗಿವೆ. ಕೆಲವು ಮನೆಗಳ ಕಿಟಕಿ ಗಾಜುಗಳು ಮುರಿದುಹೋಗಿವೆ. ಗೋಡೆಯಲ್ಲಿ ಬಿರುಕುಗಳು ಕೂಡ ಉಂಟಾಗಿವೆ.




