ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ಕೊಲೆಸ್ಟ್ರಾಲ್, ಕ್ಷಯ (TB), ಸಂಧಿವಾತ ಹಾಗೂ ಇತರ ರೋಗಗಳಿಗೆ ಬಳಸುವ ಔಷಧಿಗಳ ಪಟ್ಟಿಯನ್ನು ಜಿಎಸ್‌ಟಿ ಕೌನ್ಸಿಲ್‌ಗೆ ಸಲ್ಲಿಸಲಾಗಿದೆ. ಅವುಗಳನ್ನು ತೆರಿಗೆ ವಿನಾಯಿತಿ ವಿಭಾಗಕ್ಕೆ ಸೇರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ ತಿಳಿಸಿದೆ. ಪ್ರಸ್ತುತ, ಇವುಗಳಲ್ಲಿ ಬಹುತೇಕ ಔಷಧಿಗಳ ಮೇಲೆ 12 ರಿಂದ 18% ವರೆಗೆ ಜಿಎಸ್‌ಟಿ ವಿಧಿಸಲಾಗುತ್ತಿದೆ.
"ಅಗತ್ಯ ಔಷಧಿಗಳ ತೆರಿಗೆ ಇಳಿಕೆ ಮಾಡುವಂತೆ ನಾವು ಬಹುಕಾಲದಿಂದ ಒತ್ತಾಯಿಸುತ್ತಿದ್ದೇವೆ. ಸರಕಾರ ಇದನ್ನು ಅಂಗೀಕರಿಸಿದರೆ, ರೋಗಿಗಳಿಗೆ ಸಹಾಯವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ದಿಲೀಪ್ ಭಾನುಶಾಲಿ ಹೇಳಿದರು.
ಇನ್ಸುಲಿನ್, ಮಧುಮೇಹ, ರಕ್ತದೊತ್ತಡದ, ಹೃದಯ ಸಂಬಂಧಿ ಸೇರಿದಂತೆ ಹಲವು ಕಾಯಿಲೆಗೆ ಸಂಬಂಧಿಸಿದ ಔಷಧಿಗಳ ತೆರಿಗೆಯನ್ನು ಇಳಿಕೆ ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.




