ನವದೆಹಲಿ: ದೀರ್ಘ ಅವಧಿಗೆ ಹಾರಾಟ ಸಾಮರ್ಥ್ಯವುಳ್ಳ ಡ್ರೋನ್‌ಗಳು, ಕ್ಷಿಪಣಿಗಳ ಖರೀದಿ ಸೇರಿ ಅಂದಾಜು ₹67 ಸಾವಿರ ಕೊಟಿ ವೆಚ್ಚದಲ್ಲಿ ವಿವಿಧ ರಕ್ಷಣಾ ವ್ಯವಸ್ಥೆಗಳ ಖರೀದಿಗೆ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಮಂಗಳವಾರ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ಖರೀದಿಗೆ ಅನುಮೋದನೆ ನೀಡಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ಸಶಸ್ತ್ರ ಪಡೆಗಳಿಗಾಗಿ ಕಡಿಮೆ ಎತ್ತರದಲ್ಲಿ ದೀರ್ಘಕಾಲ ಹಾರಾಡಬಲ್ಲ ಹಾಗೂ ದೂರದಿಂದ ನಿಯಂತ್ರಣ ವ್ಯವಸ್ಥೆಹೊಂದಿದ ಯುದ್ಧವಿಮಾನಗಳ (ಎಂಎಎಲ್‌ಇ- ಆರ್‌ಪಿಎ) ಖರೀದಿಗೂ ಆರಂಭಿಕ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
'ಎಂಎಎಲ್‌ಇ-ಆರ್‌ಪಿಎ'ಗಳು ಶಸ್ತ್ರಾಸ್ತ್ರಗಳು ಹಾಗೂ ಇತರ ಪರಿಕರಗಳನ್ನು ದೂರದ ಪ್ರದೇಶಗಳಿಗೆ ಕೊಂಡೊಯ್ಯುವ ಹಾಗೂ ಬಹಳ ಹೊತ್ತಿನ ವರೆಗೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ದಿನದ 24 ಗಂಟೆಯೂ ಸಶಸ್ತ್ರ ಪಡೆಗಳ ಕಣ್ಗಾವಲು ಹಾಗೂ ಯುದ್ಧ ಸಾಮರ್ಥ್ಯವನ್ನು ಈ ಯುದ್ಧವಿಮಾನಗಳು ಹೆಚ್ಚಿಸಲಿವೆ' ಎಂದು ತಿಳಿಸಿದೆ.
ಸರಕು ಸಾಗಣೆ ವಿಮಾನಗಳಾದ ಸಿ-17 ಹಾಗೂ ಸಿ-130ಜೆ, ವಾಯುಪ್ರದೇಶ ರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುವ ಎಸ್-400 ಕ್ಷಿಪಣಿ ವ್ಯವಸ್ಥೆಯ ನಿರ್ವಹಣೆ ಗುತ್ತಿಗೆ ಕುರಿತಂತೆಯೂ ಡಿಎಸಿ ಅನುಮೋದನೆ ನೀಡಿದೆ.
ನೌಕಾಪಡೆ: ನೌಕಾಪಡೆಗಾಗಿ ಬ್ರಹ್ಮೋಸ್ ಕ್ಷಿಪಣಿ ಉಡ್ಡಯನ ಹಾಗೂ ನಿಯಂತ್ರಣ ವ್ಯವಸ್ಥೆ, ಕ್ಯಾಂಪಾಕ್ಟ್ ಯುದ್ಧವಿಮಾನಗಳು, ಮೇಲ್ದರ್ಜೆಗೇರಿಸಲಾದ ಬರಾಕ್-1 ಕ್ಷಿಪಣಿ ವ್ಯವಸ್ಥೆ
ವಾಯುಪಡೆ: ಪರ್ವತ ಪ್ರದೇಶಗಳಲ್ಲಿ ಬಳಸಬಹುದಾದ ರೇಡಾರ್‌ಗಳು ಹಾಗೂ ಸಕ್ಷಮ್/ಸ್ಪೈಡರ್ ಆಯುದ್ಧ ವ್ಯವಸ್ಥೆ ಖರೀದಿ. ಇವುಗಳಿಂದ ವಾಯುಪ್ರದೇಶ ರಕ್ಷಣಾ ಸಾಮರ್ಥ್ಯ ಹೆಚ್ಚುವುದು: ದೀರ್ಘ ಅವಧಿಗೆ ಹಾರಾಟ ಸಾಮರ್ಥ್ಯವುಳ್ಳ ಡ್ರೋನ್‌ಗಳು, ಕ್ಷಿಪಣಿಗಳ ಖರೀದಿ ಸೇರಿ ಅಂದಾಜು ₹67 ಸಾವಿರ ಕೊಟಿ ವೆಚ್ಚದಲ್ಲಿ ವಿವಿಧ ರಕ್ಷಣಾ ವ್ಯವಸ್ಥೆಗಳ ಖರೀದಿಗೆ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಮಂಗಳವಾರ ಅನುಮೋದನೆ ನೀಡಿದೆ.
ನೌಕಾಪಡೆ: ನೌಕಾಪಡೆಗಾಗಿ ಬ್ರಹ್ಮೋಸ್ ಕ್ಷಿಪಣಿ ಉಡ್ಡಯನ ಹಾಗೂ ನಿಯಂತ್ರಣ ವ್ಯವಸ್ಥೆ, ಕ್ಯಾಂಪಾಕ್ಟ್ ಯುದ್ಧವಿಮಾನಗಳು, ಮೇಲ್ದರ್ಜೆಗೇರಿಸಲಾದ ಬರಾಕ್-1 ಕ್ಷಿಪಣಿ ವ್ಯವಸ್ಥೆ
ವಾಯುಪಡೆ: ಪರ್ವತ ಪ್ರದೇಶಗಳಲ್ಲಿ ಬಳಸಬಹುದಾದ ರೇಡಾರ್‌ಗಳು ಹಾಗೂ ಸಕ್ಷಮ್/ಸ್ಪೈಡರ್ ಆಯುದ್ಧ ವ್ಯವಸ್ಥೆ ಖರೀದಿ. ಇವುಗಳಿಂದ ವಾಯುಪ್ರದೇಶ ರಕ್ಷಣಾ ಸಾಮರ್ಥ್ಯ ಹೆಚ್ಚುವುದು




