ಕಾಸರಗೋಡು: ಅಶ್ಲೀಲ ವಿಡಿಯೋ ತೋರಿಸಿ, ಬಾಲಕಿಗೆ ಕಿರುಕುಳ ನೀಡಿದ ಅಪರಾಧಿ,ಮುಳಿಯಾರು ಮಲ್ಲ ನಿವಾಸಿ ಸುಕುಮಾರನ್(45)ಎಂಬಾತನಿಗೆ ನ್ಯಾಯಾಲಯ 77ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 2.09ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 2ವರ್ಷ ಏಳು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಏಕಾಗಿದೆ.
2023 ಜೂ. 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಮನೆಯೊಳಗೆ ಕರಸಿಕೊಂಡು, ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡಿದ್ದಾನೆ. ಮಾಹಿತಿ ಬಹಿರಂಗಪಡಿಸಿದರೆ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

