ಕಾಸರಗೋಡು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸರಣಿ ಕಳವು ನಡೆದಿದ್ದು, ನಗದು ಹಾಗೂ ಸಾಮಗ್ರಿ ದೋಚಲಾಗಿದೆ. ಕಾಸರಗೋಡು ನಗರದ ಎಂ.ಜಿ ರಸ್ತೆಯ ಮೂರು ಅಂಗಡಿಗಳಿಂದ ಮಂಗಳವಾರ ರಾತ್ರಿ ಕಳವು ನಡೆದಿದೆ.
ಕಾಸರಗೋಡು ಪೋರ್ಟ್ ರಸ್ತೆ ನಿವಾಸಿ ಶಾಲಿನಿ ಎಂಬವರ ಮಾಳಿಕತ್ವದ ಫೂಟ್‍ವೇರ್ ಅಂಗಡಿ, ಯೂಸುಫ್ ಎಂಬವರ ಮಾಲಿಕತ್ವದ ಮಿನಿಮಾರ್ಟ್ ಗ್ರೋಸರಿ ಶಾಪ್, ಮಾಙËಡ್ ನಿವಾಸಿ ಎಂ.ಕೆ ಶಂಸುದ್ದೀನ್ ಮಾಲಿಕತ್ವದ ಆಶ್ವಾಸ್ ಕಮ್ಯೂನಿಟಿ ಫಾರ್ಮಸಿಯಿಂದ ಈ ಕಳವು ನಡೆದಿದೆ. ಚೆಂಗಳ ಪಾಣಲ ನಿವಾಸಿ ಅಬ್ದುಲ್‍ಖಾದರ್ ಮಾಲಿಕತ್ವದ ತರಕಾರಿ ಅಂಗಡಿಯ ಬೀಗ ಒಡೆಯಲಾಗಿದ್ದು, ಗ್ರಿಲ್ಸ್ ತೆರೆಯಲಾಗದಿರುವುದರಿಂದ ಕಳವು ವಿಫಲವಾಗಿದೆ. ಯೂಸುಫ್ ಅವರ ಮಿನಿಮಾರ್ಟ್‍ನಿಂದ 5ಸಾವಿರ ರೂ. ನಗದು, ವಿವಿಧ ಸಾಮಗ್ರಿ ಕಳವುಗೈದಿದ್ದಾರೆ. ಕೆಲವು ವಸ್ತು ಚಲ್ಲಾಫಿಲ್ಲಿಗೊಳಿಸಿದ್ದಾರೆ. ನಗರ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ನಡೆದಿರುವ ಕಳವು ಕೃತ್ಯಗಳು ಜನರಲ್ಲಿ ಆತಂಕವನ್ನು ತಂದೊಡ್ಡಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ.
ಮಂಜೇಶ್ವರದಲ್ಲಿ ಕಳವು:
ಮಂಜೇಶ್ವರದ ಹೊಸಂಗಡಿಯಲ್ಲಿ ಪೈವಳಿಕೆ ಟವರ್‍ನಲ್ಲಿ ಕಾರ್ಯಾಚರಿಸುತ್ತಿರುವ ಪೊಸೋಟ್ ನಿವಾಸಿ ಸಿದ್ದೀಕ್ ಎಂಬವರ ಮಾಲಿಕತ್ವದ ಬೇಕರಿಗೆ ನುಗ್ಗಿದ ಕಳ್ಳರು 50ಸಾವಿರ ರಊ. ಮೌಲ್ಯದ ಸಾಂಗ್ರಿ ಕಳವುಗೈದಿದ್ದಾರೆ. ಸಿದ್ದೀಕ್ ಅವರು ಬುಧವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಆಗಮಿಸಿದಾಗ ಶಟರ್‍ಬಾಗಿಲು ಅರ್ಧ ತೆರೆದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಪಾಸಣೆ ನಡೆಸಿದಾಗ ಸಾಮಗ್ರಿ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

