ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ ಸಮಾರಂಭ ಆ.9 ರಂದು ಬೆಳಿಗ್ಗೆ 10 ರಿಂದ ಕಾಲೇಜಿನ ಕನ್ನಡ ವಿಭಾಗದಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಕ.ಸಾ.ಪ/ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷತೆ ವಹಿಸಿ 'ಧ್ವನಿ' ಕೃತಿ ಬಿಡುಗಡೆಗೊಳಿಸುವರು. ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದ್ ಅಲಿ ಕೆ. ಉದ್ಘಾಟಿಸುವರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಶ್ರೀಧರ ಎನ್, ಕವಿತಾ ಕುಟೀರದ ಕಾರ್ಯದರ್ಶಿ, ನಿವೃತ್ತ ಪ್ರಾಧ್ಯಾಪಕ ಪ್ರಸನ್ನ ರೈ ಕೆ. ಮುಖ್ಯ ಅತಿಥಿಗಳಾಗಿರುವರು. ಕಾಲೇಜು ಕಚೇರಿ ಅಧೀಕ್ಷಕ ದಿನೇಶ್ ಕೆ. ಶುಭಾಶಂಸನೆಗೈಯ್ಯುವರು. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಧ್ವನಿ ಕೃತಿ ಪರಿಚಯ ನೀಡುವರು. ಕೃತಿಯ ಲೇಖಕಿ ಕುಮಾರಿ ದೀಕ್ಷಿತ ಮಾತನಾಡುವರು.
ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು-ಬರಹಗಳ ಪಕ್ಷಿನೋಟದಲ್ಲಿ ಸರ್ವಾಣಿ ಬಿ.ಕೆ., ಕಿಶನ್ ರಾಜ್, ಸೈಪ್ಹನ್ ಸಾಬ್, ಅನುಪ್ರಭ, ಶಿವಾನಿ ಪ್ರಬಂಧ ಮಂಡಿಸುವರು. ವಿದ್ಯಾಲಕ್ಷ್ಮಿ, ಲಾವಣ್ಯ, ನಂದಿನಿ, ಪೂಜಾ, ಶಿವಾನಿ, ತನುಶ್ರೀ, ತೇಜಾಕ್ಷಿ, ಅನೂಶ ಅವರಿಂದ ಕಾವ್ಯ ಗಾಯನ ನಡೆಯಲಿದೆ. ವಿಶಾಲಾಕ್ಷ ಪುತ್ರಕಳ, ಡಾ.ಸುಜೀಶ್ ಎಸ್, ಜಯಂತಿ ಕೆ. ಮೊದಲಾದವರು ಉಪಸ್ಥಿತರಿರುವರು.





