ಅಹ್ಮದಾಬಾದ್: ಸುಮಾರು ಒಂದು ವರ್ಷದ ವಿರಾಮದ ನಂತರ ವೇಟ್‌ಲಿಫ್ಟಿಂಗ್ ಗೆ ಮರಳಿದ ಮೀರಾಬಾಯಿ ಚಾನು ಸೋಮವಾರ ಆರಂಭವಾದ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ದಾಖಲೆಗಳನ್ನು ಪುಡಿಗಟ್ಟಿ ಚಿನ್ನದ ಪದಕ ಜಯಿಸಿ ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಚಾನು ಒಟ್ಟು 193 ಕೆಜಿ(84ಕೆಜಿ+109 ಕೆಜಿ)ಎತ್ತಿ ಹಿಡಿದರು.
ಈ ಮೂಲಕ ಕಾಮನ್‌ವೆಲ್ತ್, ಸ್ನ್ಯಾಚ್, ಕ್ಲೀನ್ ಆಯಂಡ್ ಜರ್ಕ್ ದಾಖಲೆಗಳನ್ನು ಮುರಿದರು. ಇದರೊಂದಿಗೆ ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಂಡರು.
31ರ ಹರೆಯದ ಚಾನು 49 ಕೆಜಿ ಬದಲಿಗೆ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. 49 ಕೆಜಿ ವಿಭಾಗವು ಒಲಿಂಪಿಕ್ಸ್‌ನಲ್ಲಿ ಇಲ್ಲ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ಯಾರಿಸ್ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಚಾನು ಅವರು ಮೊದಲ ಬಾರಿ ವೇಟ್‌ಲಿಫ್ಟಿಂಗ್‌ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿದರು.




