ಕಾಸರಗೋಡು: ಪನಯಾಲ್ ನೆಲ್ಲಿಯಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಎಸ್‍ಆರ್ ನಿಧಿಯಿಂದ ಮಂಜೂರುಮಾಡಿರುವ ಅಸೆಂಬ್ಲಿ ಸಭಾಂಗಣದ ಉದ್ಘಾಟನೆಯನ್ನು ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ನೆರವೇರಿಸಿದರು. ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಸ್ನಿನ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎ.ರಾಕೇಶ್ ಹಾಗೂ ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ನಂದಿಕೇಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಳ್ಳಿಕೆರೆ ಗ್ರಾಮ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಜಯಶ್ರೀ, ಎಸ್‍ಬಿಐ ಮುಖ್ಯ ವ್ಯವಸ್ಥಾಪಕ ಎಂ.ವಿ.ರೆಜಿ, ಎಸ್‍ಬಿಐ ಉದುಮ ಶಾಖಾ ವ್ಯವಸ್ಥಾಪಕ ಎನ್.ಜಿ.ಸಶಿಕುಮಾರ್, ಜಿ.ಎಲ್.ಪಿ.ಎಸ್ ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ.ಜಯರಾಜನ್, ಎಸ್‍ಎಂಸಿ ಅಧ್ಯಕ್ಷೆ ವಿದ್ಯಾ ಕುಮಾರಿ, ಜಿಎಚ್‍ಎಸ್‍ಎಸ್ ಚಂದ್ರಗಿರಿಯ ಶಿಕ್ಷಕಿ ನವೀನ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯದರ್ಶಿ ಗುರುವಯ್ಯ ಮಾಸ್ಟರ್ ಉಪಸ್ಥಿತರಿದ್ದರು. ಈ ಸಂದರ್ಭ ಪಿಟಿಎ ಮಾಜಿ ಅಧ್ಯಕ್ಷ ಕಮಲಾಕ್ಷ ಡಿ, ಇಂಜಿನಿಯರ್ ಅನುರಾಜ್ ಎನ್ ಹಗೂ ಗೋಪಿನಾಥನ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಕೆ.ಟಿ.ಬಾಬು ಸ್ವಾಗತಿಸಿದರು. ಪಿಟಿಎ ಅಧ್ಯಕ್ಷ ಬಿ.ಆರ್. ದಿನೇಶ್ ಕುಮಾರ್ ವಂದಿಸಿದರು.





