ಕಾಸರಗೊಡು: ಓಣಂ ಹಬ್ಬದ ಕಾಲಾವಧಿಯಲ್ಲಿ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದ ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ನಿತ್ಯೋಪಯೋಗಿ ಸಾಮಗ್ರಿ ಪೂರೈಸಲು ಸರ್ಕಾರ ಬದ್ಧವಾಗಿರುವುದಾಗಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ನಾಗರಿಕ ಪೂರೈಕೆ ಇಲಾಖೆಯ ಸಪ್ಲೈಕೋ ವತಿಯಿಂದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ವೈಟ್ ಲೈನ್ ಕಾಂಪ್ಲೆಕ್ಸ್ ಬಳಿ ಆರಂಭಿಸಲಾದ ಜಿಲ್ಲಾ ಮಟ್ಟದ ಓಣಂ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಅವರು, ಓಣಂ ಕಾಲಾವಧಿಯಲ್ಲಿ ನಿತ್ಯೋಪಯೋಗಿ ಸಾಮಗ್ರಿಗಳ ಕೃತಕ ಕೊರತೆಯಿಂದಾಗಿ ಜನರು ಪರದಾಡುವುದನ್ನು ತಡೆಯಲು, ಸರ್ಕಾರ ನಾಗರಿಕ ಪೂರೈಕೆ ಇಲಾಖೆಗೆ 100 ಕೋಟಿ ರೂ. ಈಗಾಗಲೇ ಪೂರೈಸಿದೆ. ತೆಂಗಿನ ಎಣ್ಣೆಯ ಬೆಲೆ ಏರಿಕೆ ಜನರನ್ನು ಚಿಂತೆಗೀಡುಮಾಡಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದ ಕಡಿಮೆ ಬೆಲೆಗೆ ಶುದ್ಧ ತೆಂಗಿನ ಎಣ್ಣೆಯನ್ನು ಪೂರೈಸಲು ಸಾಧ್ಯವಾಗಿದೆ. ಅಲ್ಲದೆ ನಾಗರಿಕ ಪೂರೈಕೆ ಇಲಾಖೆ ಜನರಿಗೆ ಅಕ್ಕಿ ಮತ್ತು ತೆಂಗಿನ ಎಣ್ಣೆಯನ್ನು ಒಳಗೊಂಡಿರುವ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಿತವಾದ ಬೆಲೆಯಲ್ಲಿ ಒದಗಿಸುತ್ತಿದೆ. ಓಣಂ ಮಾರುಕಟ್ಟೆಯಲ್ಲಿ ಸಪ್ಲೈಕೋ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಉತ್ಪನ್ನಗಳ ಜತೆಗೆ ಕೈಮಗ್ಗ, ಕುಟುಂಬಶ್ರೀ, ಮಿಲ್ಮಾ ಉತ್ಪನ್ನಗಳು ಮತ್ತು ತರಕಾರಿ ಉತ್ಪನ್ನಗಳನ್ನು ವಿಶೇಷ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಓಣಂ ಅಂಗವಾಗಿ ಸಪ್ಲೈಕೋ ಸುಮಾರು 2.5 ಲಕ್ಷ ಕ್ವಿಂಟಾಲ್ ಆಹಾರ ಧಾನ್ಯಗಳನ್ನು ಸಂಗ್ರಹಿಸಿದೆ. ಪ್ರಸಕ್ತ ಓಣಂ ಕಾಲಾವಧಿಯಲ್ಲಿ ನೀಡಲಾಗುತ್ತಿರುವ 8 ಕೆಜಿ ಸಬ್ಸಿಡಿ ಅಕ್ಕಿಯ ಜೊತೆಗೆ, ಪ್ರತಿ ರೇಶನ್ ಕಾರ್ಡ್‍ಗೆ 25 ರೂ. ದರದಲ್ಲಿ 20 ಕೆಜಿ ಕೆಂಪಕ್ಕಿ ಅಥವಾ ಬೆಳ್ತಿಗೆ ಅಕ್ಕಿ ವಿಶೇಷವಗಿ ಪೂರೈಸಲಾಗುವುದು ಎಂದು ತಿಳಿಸಿದರು.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ ಮೊದಲ ಮಾರಾಟ ನಡೆಸಿಕೊಟ್ಟರು. ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ. ಶ್ರೀಲತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಕೆ. ನಿಶಾಂತ್, ವಕೀಲ ಪಿ.ವಿ.ಸುರೇಶ್, ಬಂಗಳಂ ಕುಞÂಕೃಷ್ಣನ್, ಕುರಿಯಕೋಸ್ ಪ್ಲಾಪರಂಬಿಲ್, ಕರಿಯುಂ ಚಂದೇರಾ, ವಿ.ವೆಂಕಟೇಶ್, ವಕೀಲ ಕೆ.ವಿ. ರಾಮಚಂದ್ರನ್, ಉದಿನೂರು ಸುಕುಮಾರನ್, ಕೆ.ಸಿ. ಮುಹಮ್ಮದ್‍ಕುಞÂ, ಪ್ರಮೋದ್ ಕರುವಾಲಂ, ಪಿ.ಟಿ ನಂದಕುಮಾರ್ ಉಪಸ್ಥಿತರಿದ್ದರು. ಸಪ್ಲೈಕೋ ಡಿಪೆÇೀ ವ್ಯವಸ್ಥಾಪಕ ಸಿ. ರವೀಂದ್ರನ್ ಸ್ವಾಗತಿಸಿದರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್. ಬಿಂದು ವಂದಿಸಿದರು.





