ಕಾಸರಗೋಡು: ಪೆರುಂಬಳದಲ್ಲಿ ಮನೆಯೊಂದರಲ್ಲಿ ವಾಷಿಂಗ್ ಮೆಶಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿ ಮನೆಯೊಳಗೆ ವ್ಯಾಪಿಸಿದ ಪರಿಣಾಮ ವ್ಯಾಪಕ ಹಾನಿಯುಂಟಾಗಿದೆ. ಪೆರುಂಬಳ ಕಕ್ಕಡಂ ಬೇನೂರು ರಸ್ತೆ ನಿವಾಸಿ, ಬೆಳ್ಳೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಅಬ್ದುಲ್ ವಾಜಿದ್ ಎಂಬವರ ಮನೆಯಲ್ಲಿ ಬೆಂಕಿ ಅನಾಹುತ ಸಂಬವಿಸಿದೆ. ಅಬ್ದುಲ್ ವಾಜಿದ್ ಅವರ ಪತ್ನಿ, ವಾಷಿಂಗ್ ಮೆಶಿನ್‍ನಲ್ಲಿ ಬಟ್ಟೆ ಹಾಕಿ ಮನೆಕೆಲಸದಲ್ಲಿ ನಿರತರಾಗಿದ್ದ ಸಂದರ್ಭ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಗೆ ವ್ಯಾಪಿಸಲಾರಂಭಿಸಿತ್ತು. ತಕ್ಷಣ ಅಗ್ನಿಶಾಮಕದಳಕ್ಕೆ ನೀಡಿದ ಮಾಹಿತಿಯನ್ವಯ ಸೀನಿಯರ್ ಫಯರ್ ಆ್ಯಂಡ್ ರಿಸ್ಕ್ಯೂ ಅಧಿಕಾರಿ ಕೆ. ಹರ್ಷ ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ಶಮನಗೊಳಿಸಿದೆ. ವಾಶಿಂಗ್ ಮೆಶಿನ್ ಸಂಪೂರ್ಣ ಹಾನಿಗೊಂಡಿದ್ದು, ಮನೆ ಕಿಟಿಕಿ ಬಾಗಿಲು ಸೇರಿದಂತೆ ವಿವಿಧ ಸಾಮಗ್ರಿ ಹಾನಿಗೀಡಾಗಿದೆ.




