ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವತಿಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ದೇಶೀಯ ವ್ಯಾಪಾರ ದಿನಾಚರಣೆಯನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್. ಧ್ವಜಾರೋಹಣಗೈದರು. ಸದಸ್ಯರೊಂದಿಗೆ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ಬಸ್ಸುತಂಗುದಾಣದ ಪರಿಸರದಲ್ಲಿ ಸಾರ್ವಜನಿಕರಿಗೆ ಪಾಯಸ ವಿತರಿಸಲಾಯಿತು. ಬದ್ರಿಯಾ ಮುಹಮ್ಮದ್ ಅವರಿಗೆ ನೀಡುವ ಮೂಲಕ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮುಹಮ್ಮದ್ ಹಾಜಿ ಉದ್ಘಾಟಿಸಿದರು. ನಂತರ ವಿಶ್ರಾಂತಿಯ ಜೀವನವನ್ನು ನಡೆಸುತ್ತಿರುವ ಹಿರಿಯ ವ್ಯಾಪಾರಿಗಳಾದ ಸೂಫಿ, ಕುಮಾರನ್ ನಾಯರ್, ದಾಮೋದರನ್ ಮಣಿಯಾಣಿ ಇವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಗೆ ಟಾರ್ಚ್ ಲೈಟ್ ಕೊಡುಗೆಯಾಗಿ ನೀಡಲಾಯಿತು. ಯೂತ್‍ವಿಂಗ್ ಬದಿಯಡ್ಕ ಘಟಕದ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಅನ್ನದಾನ ನಡೆಯಿತು. ಘಟಕದ ಉಪಾಧ್ಯಕ್ಷ ರಾಜುಸ್ಟೀಫನ್, ಪ್ರಧಾನ ಕಾರ್ಯದರ್ಶಿ ರವಿನವಶಕ್ತಿ, ಕೋಶಾಧಿಕಾರಿ ಜ್ಞಾನದೇವ ಶೆಣೈ, ಕಾರ್ಯದರ್ಶಿಗಳಾದ ಉದಯಶಂಕರ, ವಿಶ್ವನಾಥನ್, ಯೂತ್‍ವಿಂಗ್ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಯೀದ್, ಮಹಿಳಾ ಸಮಿತಿ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.




.jpg)
