ಪೆರ್ಲ: ಶತಮಾನಗಳ ಜ್ಞಾನವನ್ನು ವೇದ ಶಾಸ್ತ್ರಗಳಿಂದ ಆಧುನಿಕ ವೈಜ್ಞಾನಿಕ ಸಂಶೋಧನೆಯ ವರೆಗೆ ಹೇಗೆ ಸಂಪರ್ಕಿಸುತ್ತದೆ ಎನ್ನುವುದನ್ನು ಸಂಸ್ಕøತ ಭಾಷೆ ಮತ್ತದರ ಅಧ್ಯಯನ ಎತ್ತಿ ತೋರಿಸುತ್ತದೆ. ಕಂಪ್ಯೂಟರ್ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಭಾಷಾ ಶಾಸ್ತ್ರದಲ್ಲಿ ಉಪಯುಕ್ತ ತಾರ್ಕಿಕ ಚೌಕಟ್ಟನ್ನು ಸಂಸ್ಕøತದ ಮೂಲಕ ಕಂಡುಕೊಳ್ಳಬಹುದೆಂದು ಆಧುನಿಕ ಭಾಷಾ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಂಸ್ಕøತ ದಿನಾಚರಣೆ ಆ ಭಾಷೆಯ ಮಹತ್ವಿಕೆಯನ್ನು ಪರಿಚಯಿಸುವಲ್ಲಿ ಪರಿಣಾಮಕಾರಿ ಎಂದು ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಕøತ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಮಂಗಳವಾರ ನಡೆದ ವಿಶೇಷ ಅಸೆಂಬ್ಲಿ ಮತ್ತು ಪ್ರದರ್ಶಿನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೃಜನಾತ್ಮಕ ಪೋಸ್ಟರ್ ತಯಾರಿ ಮತ್ತು ಚಿತ್ರಕಲಾ ಸ್ಪರ್ಧೆಗಳು ಸಹಿತ ವಿವಿಧ ಆಯಾಮಗಳ ಚಟುವಟಿಕೆ ಸಂಸ್ಕøತವನ್ನು ಪ್ರಸರಿಸುವುದರಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಇಂತಹ ವಿಷಯಗಳು ಸಮುದಾಯ ಮಟ್ಟಕ್ಕೆ ತಲುಪಬೇಕು ಎಂದವರು ಕರೆನೀಡಿದರು.
ಶಿಕ್ಷಕರಾದ ಮನೋಹರ, ಶಿಲ್ಪಾ, ಸಂಧ್ಯಾ ಅವರು ಈ ಸಂದರ್ಭ ಜ್ಞಾನ ಪ್ರದೀಪ ಸಂಸ್ಕøತ ಪ್ರದರ್ಶಿನಿಯನ್ನೂ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಸಂಸ್ಕøತ ಭಿತ್ತಿಪತ್ರ ಲೇಖನ, ಶುಭಾಶಯ ಪತ್ರ ಲೇಖನ, ರಾಮಾಯಣ ಮತ್ತು ಮಹಾಭಾರತ ಸಂಸ್ಕøತ ಕ್ವಿಜ್ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಂಸ್ಕøತ ವಾರ್ತಾವಾಚನ, ಸಂಪೂರ್ಣ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿದರು. ಸಂಸ್ಕøತ ಶಿಕ್ಷಕಿ ಅಕ್ಷತಾ ಭಟ್ ಸಹಕರಿಸಿದರು.




.jpg)
.jpg)
.jpg)
.jpg)
