ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು, ಗುರುವಾರ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಸಂಗೀತಾರಾಧನೆ ನಡೆಯಿತು. ಸ್ಯಾಕ್ಸೋಫೆÇೀನ್ ವಾದನದಲ್ಲಿ ವಿದ್ವಾನ್ ಹರೀಶ್ ಪಾಂಡವ, ವಯಲಿನ್‍ನಲ್ಲಿ ಕು. ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ವಿದ್ವಾನ್ ವಿನೋದ ಶ್ಯಾಮ್, ಮೋರ್ಸಿಂಗ್‍ನಲ್ಲಿ ವಿದ್ವಾನ್ ತಿರುಮಲೆ ಗೋಪಿಶ್ರವಣ, ಕೊನ್ನಕೋಲ್‍ನಲ್ಲಿ ವಿದ್ವಾನ್ ಸೋಮಶೇಖರ್ ಜೋಯಿಸ್ ಜೊತೆಗೂಡಿದರು.
ಆ.24ರಂದು ಮಾನ್ಯವಲಯ ಸಮಿತಿಯ ಸೇವೆ :
ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮಾನ್ಯ ವಲಯ ಸಮಿತಿ ವತಿಯಿಂದ ಒಂದು ದಿನದ ಪೂರ್ಣಸೇವೆ ಹಾಗೂ ಹಸಿರುವಾಣಿ ಹೊರೆಕಾಣಿಕೆ ಆ.24 ರಂದು ಭಾನುವಾರ ಜರಗಲಿರುವುದು. ಶ್ರೀಸಚ್ಚಿದಾನಂದ ಭಾರತೀ ಶಿಷ್ಯವೃಂದ ಮಾನ್ಯ ಇವರಿಂದ ಭಜನೆ ಹಾಗೂ ವೃಂದಾವನ ಬಾಲಗೋಕುಲ ಮಾನ್ಯ ಇವರಿಂದ ಕುಣಿತ ಭಜನೆ ನಡೆಯಲಿರುವುದು. ಬೆಳಗ್ಗೆ 9ಕ್ಕೆ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಮಾನ್ಯ ಶ್ರೀ ಅಯ್ಯಪ್ಪ ಮಂದಿರದ ದಾರಿಯಾಗಿ ಎಡನೀರು ಶ್ರೀಮಠಕ್ಕೆ ಹೊರೆ ಕಾಣಿಕೆ ಹೊರಡಲಿದೆ ಎಂದು ಚಾತುರ್ಮಾಸ್ಯ ಸಮಿತಿ ಮಾನ್ಯ ವಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

.jpg)
