ತಿರುವನಂತಪುರಂ: ಶಾಲಾ ಮಕ್ಕಳೊಂದಿಗೆ ರಾತ್ರಿ ವಿಹಾರಕ್ಕೆ ಅವಕಾಶ ನೀಡುವುದಿಲ್ಲ. ಮೊನ್ನೆ ತಿರುವನಂತಪುರದ ಶಾಲೆಯಿಂದ ರಾತ್ರಿ 10 ಗಂಟೆಗೆ ವಿಹಾರಕ್ಕೆ ತೆರಳಿದ್ದರು. ರಾತ್ರಿ ವಿಹಾರಕ್ಕೆ ಅವಕಾಶ ನೀಡಬಾರದು ಎಂದು ಮೊದಲೇ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವ ವಿ. ಶಿವನ್‍ಕುಟ್ಟಿ ಹೇಳಿರುವರು.
ಆರ್ಥಿಕವಾಗಿ ಸಬಲರಾಗಿರದ ಮಕ್ಕಳನ್ನು ಪ್ರವಾಸ ಮಾಡದಂತೆ ಹೊರಗಿಡಲು ಸಹ ಅವಕಾಶವಿಲ್ಲ. ಶಾಲೆಗಳು ಬಡ ಮಕ್ಕಳನ್ನು ಸೇರಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಬೇಕು.
ಹಣದ ಕೊರತೆಯಿಂದಾಗಿ ಮಗುವಿಗೆ ಅವಕಾಶ ನಿರಾಕರಿಸುವುದು ಅನ್ಯಾಯ. ಎಲ್ಲರನ್ನೂ ಸೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಯಾವುದೇ ಪ್ರವಾಸ ಮಾಡಬೇಕಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿರುವರು.




