HEALTH TIPS

ಇಂದು ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ನಿಜವೇ?

ಗ್ರಹಣಕಾಲವುಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವನ್ನು ಕೇವಲ ಖಗೋಳ ವಿದ್ಯಮಾನವೆಂದುಪರಿಗಣಿಸಲಾಗುತ್ತದೆ. ಆದರೆಧರ್ಮಗ್ರಂಥಗಳ ಪ್ರಕಾರ,ಸೂರ್ಯಗ್ರಹಣವೆಂಬುದು ರಾಹು ತನ್ನ ಸೇಡು ತೀರಿಸಿಕೊಳ್ಳಲು ಸೂರ್ಯನನ್ನು ನುಂಗುತ್ತಾನೆ , ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ . ಇದೀಗ ಆಗಸ್ಟ್ ​ 2 ರಂದು ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸಲಿದೆ ಎಂಬ ಸುದ್ದಿ ಸಖತ್ ​​ ವೈರಲ್ ​ ಆಗುತ್ತಿದೆ . ಹಾಗಿದ್ರೆ ನಾಳೆ ಅಂದರೆ ಆಗಸ್ಟ್​ 2 ನಿಜವಾಗಿಯೂ ಗ್ರಹಣ ಸಂಭವಿಸಲಿದೆಯೇ ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ .

ಆಗಸ್ಟ್ 2 ರಂದು ಅತಿದೊಡ್ಡ ಸೂರ್ಯಗ್ರಹಣ?

ಇತ್ತೀಚಿನದಿನಗಳಲ್ಲಿಸುದ್ದಿಯಾಗುತ್ತಿರುವಪ್ರಕಾರಆಗಸ್ಟ್ 2 ರಂದು ಅತಿದೊಡ್ಡ ಸೂರ್ಯಗ್ರಹಣಸಂಭವಿಸಲಿದೆಎಂದುಹೇಳಲಾಗುತ್ತಿದೆ. ಈ ಸಮಯದಲ್ಲಿ,ಸುಮಾರು 6 ನಿಮಿಷಗಳ ಕಾಲಕಗ್ಗತ್ತಲಿನಿಂದಕೂಡಿರುತ್ತದೆಎಂದುಹೇಳಲಾಗುತ್ತಿದೆ. ಆದರೆನಿಜಾಂಶಏನೆಂದರೆಆಗಸ್ಟ್ 2 ರಂದು ಎಲ್ಲಿಯೂ ಸೂರ್ಯಗ್ರಹಣಸಂಭವಿಸುತ್ತಿಲ್ಲ.

ಆಗಸ್ಟ್ 2, 2027ರಲ್ಲಿಅತಿದೊಡ್ಡ ಸೂರ್ಯಗ್ರಹಣಸಂಭವಿಸುವಸಾಧ್ಯತೆ:

ಈವರ್ಷಅಲ್ಲಬದಲಾಗಿ 2027ರಆಗಸ್ಟ್ 2 ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆಎಂದುಸಾಕಷ್ಟುಜ್ಯೋತಿಷಿಗಳುಮಾಹಿತಿನೀಡಿದ್ದಾರೆ. ಈಗ್ರಹಣಭಾರತದಮೇಲೆಪ್ರಭಾವಬೀರದಿದ್ದರೂಕೂಡಈಸಮಯದಲ್ಲಿಸುಮಾರು 6 ನಿಮಿಷಗಳವರೆಗೆಎಲ್ಲೆಡೆಭಾರೀಕಗ್ಗತಲುಆವರಿಸಲಿದೆಎಂದು ಹೇಳಲಾಗಿದೆ.

2025 ಎರಡನೇಸೂರ್ಯಗ್ರಹಣಯಾವಾಗ?

2025ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ. ಆದರೆ ಇವುಗಳಲ್ಲಿ ಒಂದು ಮಾತ್ರ ಭಾರತದಲ್ಲಿ ಗೋಚರಿಸಲಿದೆ. ಒಟ್ಟು ನಾಲ್ಕು ಗ್ರಹಣಗಳಲ್ಲಿ ಈಗಾಗಲೇ ಎರಡು ಸಂಭವಿಸಿವೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಸೆಪ್ಟೆಂಬರ್ 21 ರಂದು ರಾತ್ರಿ 11 ಗಂಟೆಯಿಂದ ಸೆಪ್ಟೆಂಬರ್ 22 ರಂದು ಬೆಳಗಿನ ಜಾವ 3:24 ರವರೆಗೆ ಇರುತ್ತದೆ, ಅಂದರೆ ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 24 ನಿಮಿಷಗಳ ಕಾಲ ಇರುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries