ನ್ಯೂಯಾರ್ಕ್: 'ಭಾರತ ಮತ್ತು ಅಮೆರಿಕ ಒಟ್ಟಾಗಿ ಆಧುನಿಕ ಸವಾಲುಗಳನ್ನು ಎದುರಿಸಲಿವೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
'ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಕ್ಕೆ ದೀರ್ಘಾವಧಿ ಮತ್ತು ಐತಿಹಾಸಿಕ ಮಹತ್ವ ಇದೆ. ಉಭಯ ದೇಶಗಳು ಒಟ್ಟಿಗೆ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಲಿವೆ' ಎಂದು ರುಬಿಯೊ ಭಾರತಕ್ಕೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಸಂದರ್ಭದಲ್ಲಿ ತಿಳಿಸಿದ್ದಾರೆ.




