ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಜಿಲ್ಲಾ ಸಂಘದ ಪ್ರಧಾನ ಕಚೇರಿ ತೂಮಿನಾಡುನಲ್ಲಿ ಆಚರಿಸಲಾಯಿತು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ಧ್ವಜಾರೋಹಣಗೈದರು. ಕಟ್ಟಡ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ ಹಾಗೂ ಮಂಜೇಶ್ವರ ಶಾಖೆಯ ಜೊತೆ ಕಾರ್ಯದರ್ಶಿ ಆನಂದ ಕಣ್ವತೀರ್ಥ ಶುಭ ಹಾರೈಸಿದರು. ಜಿಲ್ಲಾ ಸಂಘದ ಕೋಶಾಧಿಕಾರಿ ಈಶ್ವರ್ ಕಣ್ವತೀರ್ಥ ಸ್ವಾಗತಿಸಿ, ವಂದಿಸಿದರು. ಸಂಘದ ಪದಾಧಿಕಾರಿಗಳು, ಹಿತೈಷಿ ಬಂಧುಗಳು, ದೇಶಾಭಿಮಾನಿಗಳು ಉಪಸ್ಥಿತರಿದ್ದರು.




.jpg)
