ಮುಳ್ಳೇರಿಯ: ಶ್ರೀರಾಮನ ಆದರ್ಶಗಳ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಯುವಜನತೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ವ್ಯಾಪಕವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಮಾಯಣ, ಭಗವದ್ಗೀತೆ ಮುಂತಾದ ಗ್ರಂಥಗಳ ಬಗ್ಗೆ ಪ್ರವಚನಗಳನ್ನು ಏಪ9ಡಿಸುವುದರಿಂದ ಉತ್ತಮ ಸಂಸ್ಕಾರದ ಸಮಾಜ ನಿರ್ಮಾಣ ಸಾಧ್ಯ ಎಂದು ಕಾಸರಗೋಡು ತಹಸೀಲ್ದಾರ್ ರಮೇಶನ್ ಪೊಯಿನಾಚಿ ಹೇಳಿದರು.
ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಆ.12 ರಂದು ನಡೆದ ರಾಮಾಯಣ ಪ್ರವಚನ ಕಾರ್ಯಕ್ರಮದ ಸಮಾರೋಪ ಹಾಗೂ ನಿವೃತ್ತ ಡೆಪ್ಯುಟಿ ತಹಸೀಲ್ದಾರ್ ಹಾಗೂ ಧಾಮಿ9ಕ ಪ್ರವಚನಕಾರರೂ ಆಗಿರುವ ನಾರಾಯಣ ಗೋಸಾಡ ಅವರನ್ನು ಸನ್ಮಾನಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಕಂದಾಯ ಇಲಾಖೆಯಲ್ಲಿ ಜನಾನುರಾಗಿಯಾಗಿ ಸರ್ಕಾರಿ ಸೇವೆಯಲ್ಲಿ ಉತ್ತಮ, ಸ್ವಚ್ಛ, ದಕ್ಷ ಸೇವೆ ನೀಡಿದ ನಾರಾಯಣ ಗೋಸಾಡ ಅಂತವರನ್ನು ನಿವೃತ್ತಿ ನಂತರ ಗುರುತಿಸಿ ಸನ್ಮಾನಿಸುವುದರಿಂದ ಎಲ್ಲಾರಂಗಗಳಲ್ಲೂ ಉತ್ತಮ ಸೇವೆ ಸಲ್ಲಿಸಲು ಜನರಿಗೆ ಸ್ಪೂರ್ತಿ ನೀಡುವುದು. ಅದರಲ್ಲೂ ಯುವಜನತೆ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಕಠಿಣ ಪರಿಶ್ರಮ ನಡೆಸಿ ಸಮಾಜದಲ್ಲಿ ಮುಂದೆ ಬರಲು ಇದು ಒಂದು ಉತ್ತಮ ಸಂದೇಶ ಎಂದು ಅವರು ಹೇಳಿದರು.
ಶ್ರೀ ಮಹಿಷಮರ್ಧಿನಿ ಭಜನಾ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಭಜನ ಸಂಘದ ಅಧ್ಯಕ್ಷ ಪ್ರಸಾದ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಪ್ರವಚನಕಾರ,ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ರೈ ಮವ್ವಾರು, ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ, ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ, ಶ್ರೀಕ್ಷೇತ್ರದ ಅರ್ಚಕ ಶ್ರೀ ರಾಘವೇಂದ್ರ ಚಡಗ ಗೋಸಾಡ ಮುಂತಾದವರು ಶುಭಹಾರೈಸಿದರು.
ಮೃದುಲ್ ರೈ ಸನ್ಮಾನ ಪತ್ರ ವಾಚಿಸಿದರು. ಶ್ರೀಕ್ಷೇತ್ರದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಅಭಿನಂದನ ಭಾಷಣ ನಿರ್ವಹಿಸಿದರು. ರವಿರಾಜ್ ಮಾಸ್ತರ್ ಮಲ್ಲಮೂಲೆ ಶುಭ ಹಾರೈಸಿದರು. ಭಜನ ಸಂಘದ ಕೋಶಾಧಿಕಾರಿ ಸುನಿಲ್ ಮಣಿಯಾಣಿ ಗೋಸಾಡ, ಭಜನ ಸಂಘದ ಹಾಗೂ ಕ್ಷೇತ್ರದ ಸೇವಾ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಹಿರಿಯ ಸದಸ್ಯ ಸುಬ್ಬ ಪಾಟಾಳಿ ಗೋಸಾಡ ಹಾಗೂ ರಾಜಕುಮಾರ್, ಸೇವಾಸಮಿತಿಯ ಕಾಯ9ಕಾರಿ ಸಮಿತಿ ಸದಸ್ಯ ಹರಿಶ್ಚಂದ್ರ ಪಾಟಾಳಿ ಹಾಗೂ ಭಜನ ಸಂಘದ ಹಿರಿಯ ಸದಸ್ಯ ಭಾಸ್ಕರ ರೈ ಗೋಸಾಡ ಮುಂತಾದವರು ಉಪಸ್ಥಿತರಿದ್ದರು. ಕುಮಾರಿಯರಾದ ಧನ್ಯಶ್ರೀ ಚಡಗ ಹಾಗೂ ದಿವ್ಯಶ್ರೀ ಚಡಗ ಗೋಸಾಡ ಪ್ರಾರ್ಥನಾ ಗೀತೆ ಹಾಡಿದರು. . ಭಜನ ಸಂಘದ ಕಾರ್ಯದರ್ಶಿ ಸತೀಶ್ ರೈ ಗೋಸಾಡ ಸ್ವಾಗತಿಸಿ, ಶ್ರೀಮಹಿಷಮರ್ಧಿನಿ ಸೇವಾ ಸಮಿತಿಯ ಕಾರ್ಯದರ್ಶಿ ಸದಾಶಿವ ರೈ ಗೋಸಾಡ ವಂದಿಸಿದರು.




.jpg)
