ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ವಫ ಫಾತಿಮಾ ನೇತೃತ್ವದಲ್ಲಿ ಶಾಲಾ ಅಸೆಂಬ್ಲಿ ನಡೆಸಿ, ಶಾಲಾ ವ್ಯವಸ್ಥಾಪಕಿ ಪರಮೇಶ್ವರಿ. ಪಿ.ಎಚ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಸ್ವಾಗತಿಸಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ, ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯ ಶಂಕರನಾರಾಯಣ ಭಟ್, ಪರಮೇಶ್ವರಿ ಪಿ.ಎಚ್. ಶುಭಾಶಂಸನೆಗೈದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಷೀರ್ ಸಾಪೆÇ್ಟ್ಕೀ, ಉಪಾಧ್ಯಕ್ಷ ಜೈ ಗಣೇಶ್, ಮಾತೃ ಸಂಘದ ಅಧ್ಯಕ್ಷೆ ಹಸೀನಾ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಅಧ್ಯಕ್ಷ ಬಷೀರ್ ಸಾಪೆÇ್ಟ್ಕೀ ಹಾಗೂ ಫ್ರೆಂಡ್ಸ್ ಕ್ಲಬ್ ಬೆಳ್ಳಿಪದವು ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ಮುಖ್ಯೋಪಾಧ್ಯಾಯರು ವಂದನೆ ಸಲ್ಲಿಸಿದರು. ಶಿಕ್ಷಕ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.




.jpg)
