ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿ ವತಿಯಿಂದ ಬಡಾಜೆ ಶಾಲೆಗೆ ದೊರಕಿದ ಸುಮಾರು 10 ಲಕ್ಷದಷ್ಟು ಅನುದಾನದ ನಿಧಿಯನ್ನು ಬಳಸಿ ನಿರ್ಮಿಸಲಾದ ಶಾಲಾ ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮ ಸೋಮವಾರ ಜರಗಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನೊ ಮೊಂತೇರೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತರಗತಿ ಕೊಠಡಿಯ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್.ಬಿ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಯಾದವ್ ಬಡಾಜೆ, ಪಿ.ಇ.ಸಿ ಕಾರ್ಯದರ್ಶಿ ಶಂಕರ ನಾರಾಯಣ ಭಟ್, ರಝಾಕ್ ಕಿಟ್ಟಗುಂಡಿ, ಮುಸ್ತಫಾ, ಗಣೇಶ್ ಶಿವಪುರ, ಬಶೀರ್ ಬಡಾಜೆ, ಎಂ.ಪಿ.ಟಿ.ಎ ಅಧ್ಯಕ್ಷೆ ಶಶಿಕಲ, ರಹೀಂ, ನಶೀದಾ ಮುಂತಾದವರು ಭಾಗವಹಿಸಿದ್ದರು. ಪಂಚಾಯತಿ ಅನುದಾನ ಲಭಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನೋ ಮೊಂತೆರೋ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ಯಾದವ್ ಬಡಾಜೆ ಇವರ ಸೇವೆಯನ್ನು ಶ್ಲಾಘಿಸಿ ಶಾಲಾ ಅಧ್ಯಾಪಕರ ಮತ್ತು ಪಿಟಿ.ಎ ಅಧ್ಯಕ್ಷರ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಪಿ.ಟಿ.ಎ ಸಂಘದ ಅಧ್ಯಕ್ಷ ಯಾಕೂಬ್ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ. ಬಿ. ಸ್ವಾಗತಿಸಿ, ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ಅಧ್ಯಾಪಕಿ ತಲ್ಲೀನ ವಂದಿಸಿದರು. ಅಶೋಕ್ ಕೊಡ್ಲಮೊಗರು ನಿರೂಪಿಸಿದರು.




.jpg)
