ಕಾಸರಗೋಡು: ಜಿಲ್ಲೆಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ಯಾಶನ್ ಗೋಲ್ಡ್ ಠೇವಣಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಆ ಸಂಸ್ಥೆ ಮುನ್ನಡೆಸುತ್ತಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮುಸ್ಲಿಂಲೀಗ್ ಮುಖಂಡ ಎಂ.ಸಿ ಕಮರುದ್ದೀನ್ ಸೇರಿದಂತೆ ಇಬ್ಬರ ವಿರುದ್ಧ ನಗರ ಠಾಣೆ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂಡಿದ್ದಾರೆ.
ತಳಂಗರೆ ಪಳ್ಳಿಕ್ಕಾಲ್ ರಸ್ತೆಯ ಕುಂಡುವಳಪ್ಪಿಲ್ ನಿವಾಸಿ ನ್ಯೂಮಾನ್ ಕುಞಹಮ್ಮದ್ ಹಾಜಿ ದೂರಿನ ಮೇರೆಗೆ ಈ ಕೇಸು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಕಾರ್ಯಾಚರಿಸುತ್ತಿದ್ದ ಖಮರ್ ಫ್ಯಾಶನ್ ಗೋಲ್ಡ್ ಪ್ರೈವೇಟ್ ಲಿ,ಇಟೆಡ್ ಸಂಸ್ಥೆ ನಿರ್ದೇಶಕರಾದ ಎಂ.ಸಿ ಕಮರುದ್ದೀನ್ ಹಾಗೂ ಪೂಕೋಯ ತಙಳ್ ವಿರುದ್ಧ ಈ ಕೇಸು.
ಪ್ರತಿ ತಿಂಗಳು ಶೇ. 10ರಷ್ಟು ಲಾಭಾಂಶ ನೀಡುವ ಭರವಸೆಯೊಂದಿಗೆ 2017 ಮೇ 9ರಂದು ತನ್ನಿಂದ 10ಲಕ್ಷ ರೂ. ಪಡೆದುಕೊಂಡಿದ್ದು, ನಂತರ ಲಾಭವನ್ನಾಗಲಿ,ಪಡೆದ ಹಣವನ್ನಾಗಲಿ ವಾಪಾಸುಮಾಡದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಎಂ.ಸಿ ಕಮರುದ್ದೀನ್ ಹಗೂ ಪೂಕೋಯ ತಙಳ್ ವಿರುದ್ಧ ಕೇರಳದ ನಾನಾ ಕಡೆ ಇಬ್ಬೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

