ಬದಿಯಡ್ಕ: ನೆಲ್ಲಕಟ್ಟೆ ಬಳಿಯ ಪೈಕ ಎಂಬಲ್ಲಿ ಮಸೀದಿ ವಠಾರದಲ್ಲಿ ನಿಲ್ಲಿಸಲಾಗಿದ್ದ ಕಾರು ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿ ಮಸೀದಿಯ ಮಾಜಿ ಸಿಬ್ಬಂದಿ, ಮಲಪ್ಪುರಂ ಮುನ್ನೂರ್ ನಿವಾಸಿ ಅಬೂಬಕ್ಕರ್ ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೈಕ ಜುಮಾ ಮಸೀದಿಯ ಉಸ್ತಾದ್ ರಾಸಬಾಖಫಿ ಹೈತಮಿ ಎಂಬವರಿಗೆ ಸೇರಿದ ಕಾರು ಗುರುವಾರ ನಸುಕಿಗೆ ಬೆಂಕಿಗಾಹುತಿಯಾಗಿತ್ತು. ಕಾರಿನಲ್ಲಿದ್ದ ಉಸ್ತಾದ್ ಅವರ ಪಾಸ್ ಪೆÇೀರ್ಟ್ ಮತ್ತು ಇತರ ದಾಖಲೆಗಳು ನಾಶಗೊಂಡಿತ್ತು. ರಾಸಬಾಖಫಿ ಅವರ ಸಂಬಂಧಿ ಮಂಗಲ್ಪಾಡಿ ನಿವಾಸಿ ಅಬ್ದುಲ್ಲ ಎಂಬವರ ಒಡೆತನದಲ್ಲಿದ್ದ ಕಾರು ಇದಾಗಿದ್ದು ಘಟನೆಯಲ್ಲಿ ನಿಗೂಢತೆಯಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ಅಬೂಬಕ್ಕರ್ ಈ ಮಧ್ಯೆ ಇದೇ ಮಸೀದಿಯಲ್ಲಿ ಈ ಹಿಂದೆ ಕೆಲಸಕ್ಕಿದ್ದು, ಯಾವುದೋ ಕಾರಣಕ್ಕಾಗಿ ಈತನನ್ನು ಅಮಾನತುಗೊಳಿಸಲಾಗಿತ್ತು. ನಂತರ ಉಸ್ತಾದ್ ಅವರಿಗೆ ಮೊಬೈಲ್ ಮೂಲಕ ಬೆದರಿಕೆಯೊಡ್ಡಿದ ಘಟನೆಯೂ ನಡೆದಿತ್ತು.

