ಕಾಸರಗೋಡು: ಪಿಕ್‍ಅಪ್ ವಾಹನದಲ್ಲಿ ಸಾಗಿಸುತ್ತಿದ್ದ, ಕೇರಳದಲ್ಲಿ ನಿಷೇಧಿಸಲ್ಪಟ್ಟಿರುವ ಭಾರಿ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಧೂರು ಸನಿಹದ ಹಿದಾಯತ್‍ನಗರ ಚೆಟ್ಟುಂಗುಳಿ ನಿವಾಸಿ ರಾಶಿದ್ ಎಂಬಾತನನ್ನು ಬಂಧಿಸಿದ್ದಾರೆ. ಪಿಕ್‍ಅಪ್ ವಾಹನದಲ್ಲಿ ಒಂದುವರೆ ಲಕ್ಷ ಪ್ಯಾಕ್‍ಟ್ ತಂಬಾಕು ಉತ್ಪನ್ನ ಹಾಗೂ 60ಕೆಜಿ ತಂಬಾಕು ಹುಡಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಭಾಗದಿಂದ ಆಗಮಿಸುತ್ತಿದ್ದ ಪಿಕ್‍ಅಪ್ ವಾಹನವನ್ನು ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಜಿಜೀಶ್ ಪಿ.ಕೆ ನೇತೃತ್ವದ ಪೊಲೀಸರ ತಂಡ ತಡೆದು ಕಾರ್ಯಾಚರಣೆ ನಡೆಸಿದೆ.
ಮನೆಯಿಂದ ತಂಬಾಕು ಉತ್ಪನ್ನ ವಶ:
ಇನ್ನೊಂದು ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಶೇಷ ಮಹಿಳಾ ಪೊಲೀಸರನ್ನೊಳಗೊಂಡ ತಂಡ ಮಧೂರು ಉಳಿಯತ್ತಡ್ಕ ಸನಿಹದ ಮನೆಯೊಂದಕ್ಕೆ ದಾಳಿ ನಡೆಸಿ ಮನೆಯೊಳಗೆ ದಾಸ್ತಾನಿರಿಸಿದ್ದ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದೆ.




